ಈ ಬಾರಿ ಶೃತಿ ಕೆ.ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪದವೀಧರೆಯಾಗಿದ್ದು, ಈ ಬಾರಿಯ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಡಿಕೇರಿ ಕ್ಷೇತ್ರಕ್ಕೆ ಇವರನ್ನು ನೀವು ಆಯ್ಕೆ ಮಾಡಿದರೆ, ಇಡೀ ತಾಲೂಕಿನ ಪ್ರಗತಿಗೆ ಇವರು ಪಣ ತೋಟ್ಟು ಸೇವೆ ಸಲ್ಲಿಸುತ್ತಾರೆ ಎಂದು ಸಂಕಲ್ಪ ತೊಟ್ಟಿದ್ದಾರೆ. ದೊಡ್ಡ ಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಬೇಕಾದರೆ, ನಿಮ್ಮ ಆಯ್ಕೆ ಇವರಾಗಿರಬೇಕು ಎಂದು ಬಯಸುತ್ತೇ‌ನೆ. ಇವರ ಸಾಮಾಜಿಕ ಕಾಳಜಿಗೆ ಮನ್ನಣೆ ನೀಡಿ ಎಂದು ವಿನಂತಿಸುತ್ತೇವೆ.

ಒಬ್ಬ ಯುವ ಮಹಿಳಾ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ನಿಲ್ಲುವ ಈ ಇವರ ನಿರ್ಧಾರ ದೊಡ್ಡ ಧೈರ್ಯ ಮಾಡಿ ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡು ಸ್ಪರ್ಧಿಸುತ್ತಿದ್ದಾರೆ. ಯುವ ಜನರ ಪಾಲ್ಗೊಳ್ಳುವಿಕೆ ರಾಜಕೀಯ ರಂಗದಲ್ಲಿ ಹೆಚ್ಚಾಗಬೇಕೆಂಬ ವಿಚಾರ ಭಾಷಣಗಳಿಗೆ ಮೀಸಲಾಗಿದೆ. ಆದರೆ‌ ಅದನ್ನು ಸುಳ್ಳಾಗಿಸಲು ಹೊರಟು ನಿಂತಿದ್ದಾರೆ. ನಿಮ್ಮ ಆಶೀರ್ವಾದ ಬಯಸಿದ್ದಾರೆ. ಯುವ ಶಕ್ತಿಯ ದರ್ಶನ ರಾಜಕೀಯ ರಂಗದಲ್ಲಿ ಆಗಬೇಕು ಎಂದರೆ ಇವರಿಗೆ ನೀವು ಅವಕಾಶ ಕೊಡಬೇಕು. ಇವರಿಗೆ ಮತ ನೀಡಿ ಹರಸುತ್ತೀರೆಂದು ನಂಬಿದ್ದಾರೆ. ನಂಬಿಕೆ ಹುಸಿ ಮಾಡದಿರಿ…!

ಮಡಿಕೇರಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಸರ್ವಾಂಗೀಣ ಪ್ರಗತಿಗೆ ಅವಿರತಾಗಿ ಸೇವೆ ಸಲ್ಲಿಸುತ್ತಾರೆಂದು ಸಂಕಲ್ಪ ತೊಟ್ಟಿದ್ದಾರೆ.

ನಗರೀಕರಣದ ಉತ್ಥಾನಕ್ಕೆ ಹಾಗೂ ನಗರ ವ್ಯಾಪ್ತಿಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಪೂರ್ತಿಯಾಗಿ ನೀಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಮಡಿಕೇರಿಯ ಪ್ರತಿ ಪ್ರಜೆಗೂ ಸರಕಾರದ ಸೌಲಭ್ಯಗಳು ಹಾಗು ಯೋಜನೆಗಳ ಫಲಾನುಭವ ಸಿಗುವಂತೆ ಕಾಳಜಿ ವಹಿಸುತ್ತಾರೆ.

ಮಡಿಕೇರಿಯ ಜನತೆಯಲ್ಲಿ ಹಲವಾರು ಜನರು ಪ್ರವಾಸೋದ್ಯಮದ ಮೇಲೆ ಅವಲಂಭಿತವಾಗಿದ್ದಾರೆ. ಹಾಗಾಗಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಯುವ ಜನರಿಗೆ ಉದ್ಯೋಗ ಸೃಷ್ಟಿಯನ್ನು ಮಾಡುತ್ತಾರೆ. ಪ್ರವಾಸಿ ಸ್ಥಳಗಳ ಮೂಲಭೂತ ಸೌಕರ್ಯ ಹೆಚ್ಚಿಸಿ, ನೈರ್ಮಲ್ಯಕ್ಕೆ ಒತ್ತು ನೀಡಿ, ಸಮರ್ಪಕ ಶೌಚಾಲಯದ ವ್ಯವಸ್ಥೆ ಮಾಡುತ್ತಾರೆ.

ಮಡಿಕೇರಿ ತಾಲೂಕಿನ ಸ್ವಚ್ಛತೆಗೆ, ನೈರ್ಮಲ್ಯಕ್ಕೆ ಮನ್ನಣೆ ನೀಡುತ್ತಾರೆ. ಸರಿಯಾದ ತ್ಯಾಜ್ಯ ನಿರ್ವಹಣೆ ಹಾಗು ವಿಲೇವಾರಿ ಆಗುವಂತೆ ಯೋಜನೆ ರೂಪಿಸುತ್ತಾರೆ.

ಕೃಷಿ ಪ್ರಧಾ‌ನ ಜಿಲ್ಲೆಯಾದ ಕೊಡಗಿನಲ್ಲಿ ರೈತರ ಸಮಸ್ಯೆಗಳಾದ ಪ್ರಾಣಿ-ಮಾನವ ಸಂಘರ್ಷ, ರಸಗೊಬ್ಬರದ ಅಭಾವ, ಸಬ್ಸಿಡಿಗಳ ವಿತರಣೆ ಹಾಗು ಇತರೆ ವಿಚಾರಗಳ ಬಗ್ಗೆ ಅಗತ್ಯವಿರುವಂತೆ ಸಮರ್ಪಕವಾಗಿ ಸ್ಪಂದಿಸಿ, ಅವರ ಸಂಕಷ್ಟಗಳಿಗೆ ನೆರವಾಗುವಂತೆ ಇವರು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ.

ಬಡವಬಲ್ಲದ, ದಲಿತ-ಧಮನಿತರ, ಶೋಷಿತರ ಶ್ರೇಯಾಭಿವೃದ್ಧಿಗೆ ದುಡಿಯುತ್ತಾರೆ.

ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಇಲ್ಲಿನ ಕ್ರೀಡಾಪಟುಗಳ ಅಪಾರ ಕೊಡುಗೆ ಇದ್ದು, ಅವರ ತರಬೇತಿಯನ್ನು ಸರಕಾರದಿಂದ ನಡೆಸುವುದು. ಕೊಡಗಿನಲ್ಲಿ ಕ್ರೀಡಾ ವಿಶ್ವ ವಿದ್ಯಾಲಯದ ಸ್ಥಾಪನೆಯ ಯೋಜನೆಗೆ ಚುರುಕು ಮುಟ್ಟಿಸಿ, ಕಾರ್ಯಗತಗೊಳಿಸಲು ಶತಾಯ ಗತಾಯ ಯತ್ನಿಸುತ್ತಾರೆ..

ಗ್ರಾಮೀಣ ಪ್ರದೇಶಗಳಲ್ಲಿ ಜನರ ಬವಣೆಗಳನ್ನು ಅರಿತು ಗ್ರಾಮಗಳ ಅಭ್ಯುದಯಕ್ಕೆ ಹಾಗು ಉನ್ನತಿಗೆ ಪಣ ತೊಟ್ಟು ಕೆಲಸ ಮಾಡುತ್ತಾರೆ.

ಉನ್ನತ ಶಿಕ್ಷಣಕ್ಕೆ ಮನ್ನಣೆ ನೀಡಿ, ಮಡಿಕೇರಿಯಲ್ಲಿ ಸರಕಾರಿ ಶಾಲೆ, ಕಾಲೇಜುಗಳ ಉನ್ನತಿಯ ಕಾರ್ಯಕ್ಕೆ ಪ್ರಯತ್ನಿಸುತ್ತಾರೆ. ಜಿಲ್ಲೆಯಲ್ಲಿ ಕಾನೂನು ಕಾಲೇಜಿನ ಸ್ಥಾಪನೆಗೆ ಬೇಕಾದ ಕ್ರಮಗಳನ್ನು ಮಾಡಿ, ಸರಕಾರದ ಮುಂದೆ ಬೇಡಿಕೆಯನ್ನು ಇಡುತ್ತಾರೆ

ವೈದ್ಯಕೀಯ ಸೇವೆ ಸಮರ್ಪಕವಾಗಿ ತಾಲೂಕಿನ ಜನರಿಗೆ ಸಿಗುವಂತಾಗುವಂತೆ ಕ್ರಮಗಳನ್ನು ನೋಡಿಕೊಳ್ಳುತ್ತಾರೆ. ಆಸ್ಪತ್ರೆಗಳ ಉನ್ನತೀಕರಣಕ್ಕೆ ನಿರಂತರ ಕೆಲಸ ಮಾಡುತ್ತಾರೆ.

ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಭಾಗಿಯಾಗಿ ನಿಮ್ಮ ಮತದಾನದ ಮೂಲಭೂತ ಹಕ್ಕನ್ನು ಪ್ರಜ್ಞಾವಂತಿಕೆಯೊಂದಿಗೆ ಚಲಾವಣೆ ಮಾಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ.

. ಜೈಹೋ ಕೊಡಗು…!