Author: Rajath dh

ಹಾಸನ-ಸೋಮವಾರಪೇಟೆ ನಡುವೆ ನೂತನ ಬಸ್ ಸೇವೆ ಆರಂಭ

ಸೋಮವಾರಪೇಟೆಯಿಂದ ಕೊಡ್ಲಿಪೇಟೆಯ ಮಾರ್ಗವಾಗಿ ಹಾಸನದ ಅರಕಲಗೂಡು ಮಾರ್ಗವಾಗಿ ಬೆಂಗಳೂರಿಗೆ ನೂತನ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ. ಈ ಬಸ್ಸು ಸಂಜೆ 6 ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಶನಿವಾರಸಂತೆ ಮಾರ್ಗವಾಗಿ 6.50ಕ್ಕೆ ಕೊಡ್ಲಿಪೇಟೆ ಬಳಿಕ ಮಲ್ಲಿಪಟ್ಟಣ – ಅರಕಲಗೂಡು – ಹೊಳೇನರಸೀಪುರ ಮಾರ್ಗವಾಗಿ…

ಸ್ಕೂಟರ್, ಟಿಪ್ಪರ್ ನಡುವೆ ಡಿಕ್ಕಿ:ಸವಾರ ಸಾವು

ಕಾರ್ಮಿಕರೊಬ್ಬರು ಕೆಲಸ ಕ್ಕೆಂದು ತೆರಳುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನದ ಗಣಸಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ನಿವಾಸಿ ಮನೋಹರ್ (33) ಮೃತಪಟ್ಟ ದುರ್ದೈವಿ.ತಿಪಟೂರಿನ ಕೊಬ್ಬರಿ ಕಾರ್ಖಾನೆಯ…

ಮಕ್ಕಂದೂರು ಪ್ರೀಮಿಯರ್ ಲೀಗ್: ಹೆಚ್‌ಸಿಸಿ ತಂಡ ಚಾಂಪಿಯನ್

ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಹಿಂದೂ ಕ್ರಿಕೆಟ್‌ಕ್ಲಬ್(ಹೆಚ್‌ಸಿಸಿ) ಹೊರ ಹೊಮ್ಮಿದೆ. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ರಾಯಲ್…

ಅರಣ್ಯ ಸಿಬ್ಬಂದಿಯನ್ನು ಬೆನ್ನಟ್ಟಿದ ಕಾಡಾನೆ

ಕರ್ತವ್ಯ ನಿರತ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಸಂದರ್ಭ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಚಿನಿವಾಡ ಪೈಸರಿಯಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೇ ಮರಿಗೆ ಜನ್ಮ ನೀಡಿದ್ದ ಹೆಣ್ಣಾನೆ ಹುಟ್ಟುತ್ತದೆ…

ಮೈಸೂರು-ಕುಶಾಲನಗರ ಹೆದ್ದಾರಿ 2025ಕ್ಕೆ ಲೋಕಾರ್ಪಣೆ:ಸಂಸದ ಪ್ರತಾಪ್ ಸಿಂಹ

ಮೈಸೂರು-ಕುಶಾಲನಗರ ನಡುವಿನ 93 ಕಿಲೋಮೀಟರ್ ಚತುಷ್ಪಥ ರಸ್ತೆಯನ್ನಾಗಿ 2025 ರಲ್ಲಿ ಲೋಕಾರ್ಪಣೆ ಮಾಡುವುದಾಗಿ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಯೋಜನೆ 4,100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್…

ಕುಶಾಲನಗರದಲ್ಲಿ ಖೋಟಾ ನೋಟು ಪ್ರತ್ಯಕ್ಷ

ಕುಶಾಲನಗರದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಗೆ ನೂರು ರುಪಾಯಿ ಮುಖ ಬೆಲೆಯ ನೋಟೊಂದು ದೊರೆತಿದೆ. ನೋಟಿನಲ್ಲಿ ಕುಶಾಲನಗರದ ಫೆಡರಲ್ ಬ್ಯಾಂಕಿನ ಮುದ್ರೆ ಸಹ ಇದ್ದು, ಅದೇಗೆ ಮತ್ತೆ ಹೊರಗೆ ಬಂತು ಎನ್ನುವುದೇ ಅಚ್ಚರಿ ಮೂಡಿಸಿದೆ.

ಶ್ರೀ ಮುತ್ತಪ್ಪಸ್ವಾಮಿ ದೇವಾಲಯ ವಾರ್ಷಿಕೋತ್ಸವಕ್ಕೆ ಚಾಲನೆ

ಸೋಮವಾರಪೇಟೆ ಪಟ್ಟಣದ ಶ್ರೀಮುತ್ತಪ್ಪ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು. ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಗಣಪತಿಹೋಮ ದೊಂದಿಗೆ ಪೂಜಾ ಕೈಂಕರ್ಯ ಆರಂಭಗೊಂಡವು.ಇದೇ…

ಬಿಸಿಲ ತಾಪಕ್ಕೆ ತಂಪೆರೆದ ಮಳೆರಾಯ

ಕರಾವಳಿ ಸೇರಿ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದ ಬೆನ್ನಲ್ಲೇ ಮಧ್ಯಾಹ್ನ ಸರಿಸುಮಾರು 2 ಗಂಟೆಯಿಂದ ಕುಶಾಲನಗರ ಮತ್ತು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಎಡಬಿಡದೆ ಮಳೆಯಾಗಿದೆ.ಏಕಾಏಕಿ ಮಳೆ…

ಕುಂಬೂರು ಸುತ್ತಮುತ್ತ ಕಸ ವಿಲೇವಾರಿ: ಗ್ರಾಮ ಪಂಚಾಯ್ತಿಯ ಜಾಣ ಕುರುಡು

ಸೋಮವಾರಪೇಟೆ ಅರಣ್ಯ ವಿಭಾಗದ ಕುಂಬೂರು ಗ್ರಾಮದ ವ್ಯಾಪ್ತಿಯ ಕಾಡಿನಲ್ಲಿ ಲೋಡ್ ಗಟ್ಟಲೆ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮುಖ್ಯ ರಸ್ತೆ ಸೇರಿದಂತೆ ಕಾಡು, ಕಾಫಿ ತೋಟದ ಒಳಗೂ ಪ್ರಯಾಣಿಕರು, ವಾಹನ ಸವಾರರರು ರಸ್ತೆ…

ಕೇರಳದ ಇರಿಟಿ ಸಮೀಪದಲ್ಲಿ ರಸ್ತೆ ಅಪಘಾತ: ಪೊನ್ನಂಪೇಟೆಯ ಇಬ್ಬರ ದುರ್ಮರಣ

ಇರ್ಟಿ ಸಮೀಪದ ಉಳ್ಳಿಲ್ ಎಂಬಲ್ಲಿ ಲಾರಿ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪೊನ್ನಂಪೇಟೆಯ ಲುಲ್ಲು ಶಾಪಿನ ಮಾಲೀಕರಾದ ರಾಹುಫ್ (54)ಹಾಗು ರಹೀಮ್ (59) ಮೃತಪಟ್ಟಿದ್ದಾರೆ. ಇವರಿಬ್ಬರೂ ತಲ್ಲಚೆರಿ ತಮ್ಮ ಮನೆಯಿಂದ ಪೊನ್ನಂಪೇಟೆಗೆ ಬರುತ್ತಿರುವಾಗ ಎದುರಿನಿಂದ ಬಂದ ಲಾರಿ…