ಸೋಮವಾರಪೇಟೆ ಅರಣ್ಯ ವಿಭಾಗದ ಕುಂಬೂರು ಗ್ರಾಮದ ವ್ಯಾಪ್ತಿಯ ಕಾಡಿನಲ್ಲಿ ಲೋಡ್ ಗಟ್ಟಲೆ ತ್ಯಾಜ್ಯ ವಿಲೇವಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಮುಖ್ಯ ರಸ್ತೆ ಸೇರಿದಂತೆ ಕಾಡು, ಕಾಫಿ ತೋಟದ ಒಳಗೂ ಪ್ರಯಾಣಿಕರು, ವಾಹನ ಸವಾರರರು ರಸ್ತೆ ಬದಿಯಲ್ಲೇ ಮದ್ಯ ಸೇವಿಸಿ ಮೋಜು ಮಸ್ತಿ ಸಂದರ್ಭ ಒಣಗಿದ ಕಾಡಿಗೆ ಬೆಂಕಿಯ ಕಿಡಿ ಸೋಕಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಇದನ್ನು ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡು ಅಲ್ಲದೆ ರಸ್ತೆ ಬದಿಯ ಕಸ ತೆರವು ಕಾರ್ಯದಲ್ಲಿ ತೊಡಗ ಬೇಕಾಗಿದೆ.