ಇರ್ಟಿ ಸಮೀಪದ ಉಳ್ಳಿಲ್ ಎಂಬಲ್ಲಿ ಲಾರಿ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪೊನ್ನಂಪೇಟೆಯ ಲುಲ್ಲು ಶಾಪಿನ ಮಾಲೀಕರಾದ ರಾಹುಫ್ (54)ಹಾಗು ರಹೀಮ್ (59) ಮೃತಪಟ್ಟಿದ್ದಾರೆ.

ಇವರಿಬ್ಬರೂ ತಲ್ಲಚೆರಿ ತಮ್ಮ ಮನೆಯಿಂದ ಪೊನ್ನಂಪೇಟೆಗೆ ಬರುತ್ತಿರುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರೂ ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟಿನ ಮಾಲೀಕರಾದ ಆಬುಟ್ಟಿ ಅವರ ಸಂಬಂಧಿಕರಾಗಿದ್ದಾರೆ. ಪೊನ್ನಂಪೇಟೆಯ ಚೇಂಬರ್ ಆಫ್ ಕಾಮರ್ಸ್ ಮೃತರಿಗೆ ಸಂತಾಪ ವ್ಯಕ್ತಪಡಿಸಿ, ಶ್ರದ್ಧಾಂಜಲಿ ಅರ್ಪಿಸಿದೆ.