ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹೈಕೋರ್ಟಿನ ಹಿರಿಯ ವಕೀಲ ಚಂದ್ರಮೌಳಿ ಮತ್ತು ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ ಕೆ ಮಂಜುನಾಥ್ , ಡಾ.ಮಂಥರ್ ಗೌಡರಿಗೆ ಟಿಕೆಟ್ ನೀಡಿರುವುದಕ್ಕೆ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.

‘ತಮಗೆ ಪಕ್ಷ ಮುಖ್ಯ, ವ್ಯಕ್ತಿಯಲ್ಲ ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲಿದೆ’ ಎಂದು ಕೆ.ಕೆ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಚಂದ್ರಮೌಳಿ ‘ತನಗೆ ಸಿಗಬೇಕಾದ ಟಿಕೆಟ್ ಮಂಥರ್ ಗೌಡರಿಗೆ ಸಿಕ್ಕಿದೆ. ಅದರಿಂದ ಬೇಸರವಿಲ್ಲ. ಮಂಥರ್ ಗೌಡ ಕೇವಲ ಸಾಂಕೇತಿಕ ಅಷ್ಟೆ ತಾನು ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತೇನೆ’ ಎಂದಿದ್ದಾರೆ.