ಕಳೆದ ಎರಡುವರೆ ತಿಂಗಳಿನಿಂದ ದುಬಾರೆ ಸಾಕಾನೆ ಶಿಬಿರದ ಕ್ರಾಲ್ ನಲ್ಲಿ ಬಂಧನದಲ್ಲಿದ್ದ ಮೂರು ಕಾಡಾನೆಗಳು ಬಂಧಮುಕ್ತವಾಗಿದೆ.

ಸಿದ್ದಾಪುರ ಸಮಿತಿಯ ಕರಡಿಗೋಡು, ಮೈಸೂರಿನ ಬಿಳಿಕೆರೆ ಹಾಗು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಸೆರೆ ಸಿಕ್ಕ ಕಾಡಾನೆಗಳನ್ನು ದುಬಾರೆ ಶಿಬಿರದ ಮರದ ದಿಮ್ಮಿಯ ಕ್ರಾಲ್ ನಲ್ಲಿ ಬಂಧಿಸಿ ಪ್ರಾಥಮಿಕ ವಾಗಿ ಪಳಗಿಸಲಾಗುತ್ತಿತ್ತು, ಇದೀಗ ಹೊರ ಬಂದ ಆನೆಗಳು ಆಯಾ ಆನೆಗಳಿಗೆ ನೇಮಿಸಲ್ಪಟ್ಟ ಮಾವುತರು ಮತ್ತು ಕಾವಾಡಿಗಳಿಂದ ನಿರಂತರ ತರಬೇತಿ ನೀಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ತಿಳಿಸಿದ್ದಾರೆ.

ನೂತನ ವಾಗಿ ಕ್ಯಾಂಪ್ ಸೇರ್ಪಡೆಯಾದ ಕರಡಿಗೋಡಿನ ಆನೆಗೆ ಮಾಣಿಕ್ಯ, ಬಿಳಿಕೆರೆಯ ಆನೆಗೆ ವನರಾಜ, ಮೂಡಿಗೆರೆ ಆನೆಗೆ ಸಾರಥಿ ಎಂದು ನಾಮಕರಣ ಮಾಡಲಾಗಿದೆ.