ವಿರಾಜಪೇಟೆ ಕಾವೇರಿ ಶಾಲೆ ಮುಂಭಾಗದಿಂದ ಕುಕ್ಲೂರು ಮುತ್ತಪ್ಪ ದೇವಸ್ಥಾನದ ವಿರಾಜಪೇಟೆ – ಮಡಿಕೇರಿ ಮುಖ್ಯ ರಸ್ತೆಯಲ್ಲಿ ನೆನ್ನೆ ರಾತ್ರಿ ಹುಲಿ ನಡೆದುಕೊಂಡು ಹೋಗಿದ್ದು ಮೊಬೈಲ್ ನಲ್ಲಿ ಸೆರೆಯಾಗಿದೆ.

ಸ್ಥಳದಲ್ಲಿ ಅದರ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪೂಮಾಲೆ ಮಂದ್ ಮೂಲಕ ವಿರಾಜಪೇಟೆ -ಮಡಿಕೇರಿ ರಸ್ತೆ ಬದಿಗೆ ತೆರಲಿರುವ ಶಂಕೆ ವ್ಯಕ್ತವಾಗಿದೆ. ಸಮೀಪದ ಅರಣ್ಯಕ್ಕೆ ಹುಲಿಯನ್ನು ಸೇರಿಸಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.