ಕೈಕೇರಿಯಿಂದ ಗೋಣಿಕೊಪ್ಪಲು ಕಡೆ ಬೆಳಗಿನ ವಾಯು ವಿಹಾರಕ್ಕೆ ಗಂಡ ಹೆಂಡತಿ ನಡೆದುಕೊಂಡು ಬರುತ್ತಿರುವ ಸಂದರ್ಭ ಗೋಣಿಕೊಪ್ಪಲಿನ ಉಮಾಮಹೇಶ್ವರ ದೇವಾಲಯದ ಸಮೀಪ ಬೆಳಿಗ್ಗೆ 7 ಗಂಟೆಗೆ ಮೈಸೂರಿನಿಂದ ಭಾಗಮಂಡಲ ಕಡೆ ತೆರಳುತ್ತಿದ್ದ ಹುಂಡೈ ಕಾರೊಂದು ಪಾದಚಾರಿ ಕೈಕೇರಿ ನಿವಾಸಿ ಜಯಮಾಚಯ್ಯ ಎಂ. ಬಿ ಎಂಬುವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಜಯಮಾಚಯ್ಯ ಅವರ ಕೈ,ಕಾಲು, ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾಗಮಂಡಲದ ನಿವಾಸಿ ಒಬ್ಬರು ಬೆಳಗಿನ ಜಾವ ಮೈಸೂರಿನಿಂದ ಭಾಗಮಂಡಲಕ್ಕೆ ಬರುವ ಸಂದರ್ಭ ನಿದ್ರೆ ಆವರಿಸಿ ಡಿಕ್ಕಿ ಪಡಿಸಲಾಗಿದೆ ಎಂದು ಹೇಳಲಾಗಿದೆ. ಕಾರು ಚಾಲಕ ಅಪ್ರಪ್ತನಾಗಿದ್ದು ಆತನಿಗೆ ವಾಹನ ಚಾಲನೆಯ ಪರವಾನಿಗೆ ಕೂಡ ಇಲ್ಲದಿರುವುದು ಕಂಡುಬಂದಿದ್ದು ಗೋಣಿಕೊಪ್ಪಲು ಪೊಲೀಸರು ಮೊಖದಮೆ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.