ಒಂದು ಮುಖ್ಯರಸ್ತೆ ಹತ್ತಾರು ಮನೆಗಳು ಒಂದಷ್ಟು ಅಂಗಡಿಗಳಿರುವ ಪುಟ್ಟ ಗ್ರಾಮ ತಿತಿಮತಿಯಲ್ಲಿ ಕೇಸರಿ ಕಂಪು ಪಸರಿಸಿದೆ.
ಹೌದು ಇದೇ ಮೊದಲ ಭಾರಿಗೆ ತಿತಿಮತಿಯಲ್ಲಿ ಹನುಮ ಉತ್ಸವ ಸಮಿತಿ ಆಯೋಜಿಸಿದ್ದ ಹನುಮ ಜಯಂತಿಗೆ ಉತ್ತಮ ಸ್ಪಂದನೆ ದೊರೆತ್ತಿದ್ದು, ಸಂಪೂರ್ಣ ತಿತಿಮತಿಯ ರಸ್ತೆ ಕೇಸರಿಮಯವಾಗಿತ್ತು.
ಮಹಿಳೆಯರು, ಪುರುಷರು, ಯುವಸಮೂಹ ಎನ್ನದೆ ಎಲ್ಲರೂ ಕೇಸರಿ ಧ್ವಜ ಹಿಡಿದು ತೆರೆದ ಬೆಳ್ಳಿ ರಥದಲ್ಲಿ ಅಂಜನೀಪುತ್ರನ ಮೆರವಣಿಗೆ ಮಾಡಲಾಯಿತು, ಮೆರವಣಿಗೆಯಲ್ಲಿ ರಾಮ ಆಂಜನೇಯನಿಗೆ ಜಯಂಘೋಷಾ ಕೇಳಿ ಬಂದವು, ಮಹಿಳಾ ಚಂಡೇವಾದಕರು, ಕೀಲು ಗೊಂಬೆಗಳು, ಮಕ್ಕಳ ಕುಣಿತ ಗಳು ಹನುಮ ಜಯಂತಿಗೆ ಹೆಚ್ಚಿನ ಮೆರುಗು ನೀಡಿತ್ತು.