ವಿರಾಜಪೇಟೆ ನಗರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ಎಂಟು ವರ್ಷಗಳಿಂದ ನೂತನ ಸಬ್ ಜೈಲ್ ಕಾಮಗಾರಿ ನಡೆಯುತ್ತಿದ್ದು, ಜೈಲ್ ಕಾರ್ಯರಂಭ ಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎನ್ನುವ ದೂರು ಕೇಳಿ ಬಂದಿದೆ.

ಸಬ್ ಜೈಲ್ ಅಕ್ಕಪಕದಲ್ಲಿ ಕೃಷಿ ಇಲಾಖೆ, BSNL, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಸತಿಗೃಹದಲ್ಲಿ ವಾಸವಿದ್ದಾರೆ.

ಜೈಲಿನಲ್ಲಿ ಆಗುವ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಲಿದ್ದು ಸ್ಥಳೀಯ ಶಾಸಕ ಎ. ಎಸ್ಫ್. ಪೊನ್ನಣ್ಣ ಮುಖ್ಯಮಂತ್ರಿ,ಸೇರಿದಂತೆ ರಾಜ್ಯ ಗೃಹ, ಬಂಧಿಖಾನೆ, ಚೀಫ್ ಸೆಕ್ರೆಟರಿಗೂ ಮನವಿ ಮಾಡಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ.