ಸೋಮವಾರಪೇಟೆ ಉಪ ವಿಭಾಗದ ಶಾಂತಳ್ಳಿ ಶಾಲಾ ವ್ಯಾಪ್ತಿಗೆ ಒಳಪಡುವ ಎಫ್1- ದೊಡ್ಡಮಳ್ತೆ ಫೀಡರ್‍ನಲ್ಲಿ ಫೀಡರ್ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆದ್ದರಿಂದ ದೊಡ್ಡಮಳ್ತೆ, ಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು, ಕಾಡುಮನೆ, ಕೂಗೆಕೊಡಿ, ಕಾಗಡಿಕಟ್ಟೆ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಾಳೆ ಹಲವೆಡೆ ಕರೆಂಟ್ ಇರಲ್ಲ
ಮಡಿಕೇರಿ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಈ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ.ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‍ಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಬೆಳಗ್ಗೆ 10 ರಿಂದ 5 ಗಂಟೆವರೆಗೆ ನಿರ್ವಹಿಸಲಾಗುವುದು.

ಆದ್ದರಿಂದ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ,ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, ಬೋಯಿಕೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.