ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ, ಇಲ್ಲ ಗುಂಡಿಗಳೇ ರಸ್ತೆಯೇ ಎನ್ನುವಂತ್ತಿದೆ ಮಡಿಕೇರಿಯಿಂದ ಗಾಳಿಬೀಡು, ಕಾಲೂರು ರಸ್ತೆ. ಮಳೆಗಾಲದಲ್ಲಿ ಕೆಸರುಮಯ, ಬೇಸಿಗೆಯಲ್ಲಿ ರಸ್ತೆಯಿಂದ ಎದ್ದು ಬಂದಿರುವ ಜೆಲ್ಲಿಕಲ್ಲು.

ಇಂತಹ ರಸ್ತೆಯಲ್ಲಿ ದಿನನಿತ್ಯ ಓಡಾಡುವ ಈ ಭಾಗದ ಗ್ರಾಮಸ್ಥರ ತಾಳ್ಮೆ ಮಿತಿ ಮೀರಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿರುವ ಈ ರಸ್ತೆ ಈ ಭಾಗದ ರೆಸಾರ್ಟ್ಗಳಿಗೆ ಆಸರೆ, ಆದರೆ ಸ್ಥಳೀಯರಿಗೆ ಮಾತ್ರ ಮರಣಕೂಪ.

ದಿನನಿತ್ಯ ಹರಸಾಹಸ ದಿಂದ ಓಡಾಡುವ ವಾಹನ ಸವಾರರು ಮತ್ತು ಪ್ರಯಾಣಿಕರು ನರಕ ದರ್ಶನ ಅನುಭವಿಸುತ್ತಿದ್ದು ರಸ್ತೆ ಮದ್ಯೆಯಲ್ಲೇ ಬಾಳೆ ಗಿಡ ನೆಟ್ಟು ತಮ್ಮ ಆಕ್ರೋಶವನ್ನು ನಾಮಫಲಕ ತಗಲುಹಾಕಿ ವ್ಯಕ್ತಪಡಿಸಿದ್ದಾರೆ, ರಸ್ತೆಗೆ ಪ್ಯಾಚ್ ವರ್ಕ್ ಬೇಡ, ಶಾಶ್ವತ ರಸ್ತೆ ಬೇಕು ಅಂತ ಒಬ್ಬರು ಹೇಳಿದರೆ ಮತ್ತೊಬ್ಬರು ಗುಂಡಿ ರಸ್ತೆಗೆ ಸ್ವಾಗತಕೋರಿದ್ದಾರೆ.

ಇದಕೆಲ್ಲಾ ಒಂದು ಹೆಜ್ಜೆ ಮುಂದು ಹೋಗಿರುವ ಕೆಲವರು ಮೂರು ತಿಂಗಳ ಹಿಂದೆ ಬಾಳೆ ಗಿಡ ನೆಟ್ಟಿದ್ದರೆ, ಈ ಹುತ್ತರಿಗೆ ಬಾಳೆ ಹಣ್ಣು ಸಿಗುತಿತೋ ಏನೋ ಅದ್ರಿಂದ ತಂಬಿಟ್ಟು ಮಾಡಿಯೋಳ್ಳಬಹುದಿತ್ತು ಎಂದೆಲ್ಲ ಮಾತು ಕೇಳಿಬರುತ್ತಿದೆ. ಕೇಳುವುದಕ್ಕೆ ಹಾಸ್ಯ ರೀತಿ ಕಂಡರೆ, ಇದು ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಸಾಕಷ್ಟು ಟ್ರೊಲ್ ಆಗುತ್ತಿದೆ.ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ಪಡೆದ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ರಸ್ತೆಗಳ ಸ್ಥಿತಿ ಬಗ್ಗೆ ಯಾಕೆ ಈ ನಿರ್ಲಕ್ಷ್ಯ ಅದೂ ಹಲವು ವರ್ಷಗಳಿಂದ ಎದ್ದಿರುವ ಪ್ರಶ್ನೆ.