ಮಡಿಕೇರಿಯಿಂದ ಸಂಪಾಜೆ ಮೂಲಕ ಅರೆಕಲ್ಲು ಭಾಗದಲ್ಲಿ ಜಗರೂಕಾಗಿರಬೇಕಿದೆ, ಇಲ್ಲಿನ ರಬ್ಬರ್ ತೋಟದಲ್ಲಿ ಒಂಟಿ ಸಲಗವೊಂದು ಅಡ್ಡಾಡುತಿದೆ. ಕೆಲವೊಮ್ಮೆ ಮುಂಜಾನೆ ನಸು ಮಂಜಿನಲ್ಲಿ ರಸ್ತೆ ಬದಿಯಲ್ಲೇ ಕಂಡು ಬರುತ್ತಿದೆ, ಕಾಡಿಗೆ ಅಟ್ಟಿದರೆ ರಬ್ಬರ್ ತೋಟದಲ್ಲಿ ಆಶ್ರಯ ಪಡೆಯುತ್ತಿದ್ದು ಕಾರ್ಮಿಕರಲ್ಲೂ ಆತಂಕ ಮೂಡಿಸುತ್ತಿದೆ. ಅರಣ್ಯ ಇಲಾಖೆ ಕ್ರಮ ವಹಿಸಿ ಎಂದು ಒತ್ತಾಯಿಸಿದ್ದಾರೆ.