ವಿರಾಜಪೇಟೆ ತಾಲೂಕು ಮಲೆತಿರಿಕೆ ಬೆಟ್ಟದಲ್ಲಿ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಎ.ಎಸ್ ಪೊನ್ನಣ್ಣ ನವರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ವಿರಾಜಪೇಟೆ ಪುರಸಭೆ ಕಾರ್ಯಾಲಯ ವತಿಯಿಂದ ಆಯೋಜನೆಗೊಂಡ ಈ ಸ್ವಚ್ಛತಾ ಕಾರ್ಯವು ಇದೇ ರೀತಿ ನಿರಂತರವಾಗಿ ನಡೆಯುತ್ತಿರಲಿ ಎಂಬ ಸಂದೇಶವನ್ನು ಶಾಸಕರು ನೀಡಿದರಲ್ಲದೆ, ಸ್ವಚ್ಛ ಪರಿಸರ ನಮ್ಮ ಮೂಲ ಧ್ಯೇಯ ಆಗಿರಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿ ಪೂಣಚ್ಚ,ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ,ಪುರಸಭೆ ಸದಸ್ಯರು,ಅಧಿಕಾರಿಗಳು,ಪೌರ ಕಾರ್ಮಿಕರು,ಮತ್ತಿತರರು ಉಪಸ್ಥಿತರಿದ್ದರು.