ಅಕಾಲಿಕ ಮಳೆಯ ಭೀತಿ ನಡುವೆಯೂ
ಕೊಡಗಿನಲ್ಲಿ ಈ ಬಾರಿ ಎಂದಿನಂತೆ ಶೃದ್ದ ಭಕ್ತಿಯಿಂದ ಪುತ್ತರಿ ಹಬ್ಬವನ್ನು ನಾಡಿನ ಜನತೆ ಆಚರಿಸಿಕೊಂಡಿದ್ದಾರೆ.

ವಿರಾಜಪೇಟೆ, ಪೊನ್ನಂಪೇಟೆ ಭಾಗದಲ್ಲಿ ಕೆಲವೆಡೆ ಹಗಲು ಹೊತ್ತು ಆಯಾ ಗ್ರಾಮಗಳಲ್ಲಿ ಕದಿರು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೊಡಗಿನ ಮಳೆ ದೇವರಾದ ಇಗ್ಗುತ್ತಪ್ಪ ದೇವಾಲಯದಲ್ಲಿ ರಾತ್ರಿ 8.30 ಕ್ಕೆ ಕದಿರು ತೆಗೆದರೆ ಉಳಿದಡೆ ರಾತ್ರಿ 8:50ಕ್ಕೆ ಕದಿರುತೆಗೆಯಲಾಯಿತು.

ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಕೊಡವ ಹಾಗೂ ಗೌಡಸಮಾಜ ಸೇರಿದಂತೆ ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಭಾಗದ ನಗರವಾಸಿಗಳು ಆಯಾ ಸಮಾಜದಲ್ಲಿ ಆಚರಿಸಿಕೊಂಡರು.

Advertisement

ಬಾಡಗರಕೇರಿಯ ಪ್ರಸಿದ್ಧ ಮೃತ್ಯುಂಜಯ ದೇವಾಲಯದಲ್ಲಿ ಊರಿನವರು ಕದಿರು ತೆಗೆದು ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ತಮ್ಮ ಮನೆಗೆ ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಂಡರು. ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಊರಿನ ತಕ್ಕ ಮುಖ್ಯಸ್ಥರು ಮತ್ತು ಊರಿನವರು ಒಟ್ಟಿಗೆ ಸೇರಿ ಹುತ್ತರಿ( ಪುತ್ತರಿ ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡರು.

ಉಳಿದಂತೆ ಸ್ವಂತ ಗದ್ದೆಯಲ್ಲಿ ಸಂಪ್ರದಾಯಿಕ ಪೂಜೆ ಸಲ್ಲಿಸಿ,ಧನ್ಯಲಕ್ಷ್ಮಿಯನ್ನು ಬರಮಾಡಿಕೊಂಡರು, ಹೊಸ ಅಕ್ಕಿಯ ಪಾಯಸ ಜೊತೆಗೆ ತಂಬಿಟ್ಟು, ಗೆಣಸು ಖದ್ಯಾ ಸವಿದು ಪಟಾಕಿ ಸಿಡಿಸಿ, ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.