ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯು ಅಧ್ಯಕ್ಷರಾದ ಶ್ರೀ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು.

ಮೊದಲಿಗೆ ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ತೀರ್ಮಾನಗಳನ್ನು ಅಂಗೀಕರಿಸಲಾಯಿತು.  ಸಭೆಯಲ್ಲಿ ಪ್ರಮುಖವಾಗಿ ಕಂದಾಯ, ತೋಟಗಾರಿಕಾ, ಅರಣ್ಯ, ಆಹಾರ, ಮಹಿಳಾ ಹಾಗು ಮಕ್ಕಳ ಕಲ್ಯಾಣ ಇಲಾಖೆಗಳ ವತಿಯಿಂದ ಜನರಿಗೆ ಸಿಗುವ ಸೌಲತ್ತು- ಸೌಕರ್ಯಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಲಾಯಿತು.

ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಿ ಆಗಿರುವ ಬಗ್ಗೆ ಗ್ರಾಮಸ್ಥರು ಖಂಡಿಸಿದರು. ಕಳೆದ ಬಾರಿ ಗಮನಕ್ಕೆ ತಂದ ಸಮಸ್ಯೆಗಳು ಇನ್ನೂ ಪರಿಹರಿಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಮತ್ತು ಅವುಗಳನ್ನು ಆದಷ್ಟು ಶೀಘ್ರದಲ್ಲಿ ಸರಿ ಪಡಿಸಲು ಜನ ಒತ್ತಾಯ ಮಾಡಿದರು.

ಈ ಸಂದರ್ಭ ನೋಡೆಲ್ ಅಧಿಕಾರಿಯಾದ ಡಾ.ನಾಗರಾಜು, ಕೂಡುಮಂಗಳೂರು ಗ್ರಾ.ಪಂ ಸದಸ್ಯರು ಹಾಗು ಸರ್ವ ಸಿಬ್ಬಂದಿಗಳು ಜೊತೆಗೆ ಹಲವಾರು ಗ್ರಾಮಸ್ಥರು ಹಾಜರಿದ್ದರು.