ಐತಿಹಾಸಿಕ ಕುಶಾಲನಗರ ಮಹಾಗಣಪತಿ ರಾಥೋತ್ಸವ ಸಂಪನ್ನಗೊಂಡಿದೆ, ಹಲವು ವರ್ಷ ಬಳಿಕ ಸಹಸ್ರಾರು ಭಕ್ತರು ಗಣಪನ ದರ್ಶನ ಪಡೆದು ಪುನೀತರಾದರು, ಹಣ್ಣುಕಾಯಿ, ಈಡುಗಾಯಿ ಎಲ್ಲಾ ಸೇವೆ ನಡೆದವು. ಇದರ ಮದ್ಯೆ ಪ್ರೇಮಿಗಳು ಗಣಪತಿ ಮುಂದೆ ತಮ್ಮ ಪ್ರೇಮ ನಿವೇದನೆ ತೋಡಿಕೊಂಡಿದ್ದಾರೆ. ಹಣ್ಣು ಜವನ ತೇರಿಗೆ ಅರ್ಪಿಸುವ ಸಂಪ್ರದಾಯ ಹಳೇ ಮೈಸೂರು ಪ್ರಾಂತ್ಯದಲ್ಲಿ ಸಾಮಾನ್ಯವಾಗಿದ್ದು, ಕುಶಾಲನಗರದಲ್ಲೂ ಬಾಳೆಹಣ್ಣಿನ ಮೇಲೆ ತಮ್ಮ ಹೆಸರನ್ನು ಬರೆದು ಗಣಪನಿಗೆ ಅರ್ಪಿಸಿ ಪ್ರೀತಿ ಗೆ ಯಶಸ್ಸು ಸಿಗಲಿ ಎಂದು ನಿವೇದನೆ ಮಾಡಿಕೊಂಡಿದ್ದಾರೆ.