ದಟ್ಟ ಅರಣ್ಯದಂಚಿನಲ್ಲಿರುವ ಹಾಡಿಯ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ಈ ದೈತ್ಯ ಹಾವು ಮರವನ್ನೇರುವ ದೃಶ್ಯವನ್ನು ಕಂಡು ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಅರಣ್ಯದ ಸಮೀಪದಲ್ಲಿರುವ ಹಾಡಿಯ ಬಳಿ ಮನುಷ್ಯನಿಗಿಂತ ಎರಡು ಪಟ್ಟು ದೊಡ್ಡದಿರುವ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.ಜನರು ನೋಡ ನೋಡುತ್ತಿದ್ದಂತೆ ಈ ಹೆಬ್ಬಾವು ಭಯದಿಂದ ನಿಧಾನವಾಗಿ ಮರವನ್ನು ಏರುತ್ತಾ ಹೋಗಿದೆ. ಈ ದೃಶ್ಯವನ್ನು ಕಂಡು ಅಲ್ಲಿದ್ದ ಕಾಡಿನ ಮಕ್ಕಳಿ ಮತ್ತು ಜನರು ಜೋರಾಗಿ ಕಿರುಚಾಡಿದ್ದಾರೆ.


ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ಭಾರತದಲ್ಲಿಯೇ ಅತೀ ದೊಡ್ಡದಾದ ಹೆಬ್ಬಾವು ಅನಿಸುತ್ತದೆ. ಇದನ್ನು ಸಂರಕ್ಷಣೆ ಮಾಡಬೇಕಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಆ ಜನಗಳಿಂದ ಹಾವುಗಳಿಗೆ ತೊಂದರೆ ಆಗದಿದ್ದರೆ ಸಾಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಹೆಬ್ಬಾವುಗಳು ಯಾರಿಗೂ ತೊಂದರೆಯನ್ನು ಕೊಡುವುದಿಲ್ಲ’ ಎಂದು ಹೇಳಿದ್ದಾರೆ.