ವಿರಾಜಪೇಟೆ ಪುರಸಭೆಯ ಎರಡನೇ ಅವಧಿಯಲ್ಲಿ ಮೊದಲ ಸಾಮನ್ಯ ಸಭೆಯು ವಿರಾಜಪೇಟೆ ಪುರಸಭೆ ಸದಸ್ಯರ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ರವರ ಅಧ್ಯಕ್ಷತೆ ನಡೆದ ಸಭೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಪುರಸಭೆಗೆ ಏಳುವರೆ ಕೋಟಿ ಸರ್ಕಾರ ಅನುದಾನ ಬಿಡುಗಡೆ ಮಾಡುವುದಾಗಿ ಬಗ್ಗೆ ಮಾಹಿತಿ ನೀಡಿದರು .
ಪುರಸಭೆ ವ್ಯಾಪ್ತಿಯ ರಸ್ತೆ ದಾರಿ ದೀಪಗಳ ಗುತ್ತಿಗೆದಾರ ಶ್ರೀನಿವಾಸ ರನ್ನು ಇದೇ ಸಂದರ್ಭ ಶಾಸಕರು ತರಾಟೆಗೆ ತೆಗೆದುಕೊಂಡರು.

ಅವಧಿ ಮುಗಿದ ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇಲ್ಲ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದರು.ಪುರಸಭೆ ವತಿಯಿಂದ ರಸ್ತೆ ಬದಿಗಳಲ್ಲಿ ಗಿಡ ಗಂಟೆಗಳು ಶುಚಿತ್ವಕ್ಕೆ ಬಳಿಸಿದ ವಿಲ್ ಕಟ್ಟರ್ ಹಾಗೂ ಜೆ ಸಿ ಬಿ ಯಾಂತ್ರಗಳಿಗೆ ಬಳಸಿದ ಹಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಹಿರಿಯ ಸದಸ್ಯರಾದ ಸಿ ಕೆ ಪೃಥ್ವಿ ನಾಥ್ ಪ್ರಶ್ನೆಗೆ,ಆರು ತಿಂಗಳಲ್ಲಿ 6,63000 ರೂಪಾಯಿ ಕಚಡ ಕಡಿಯಲು ಹಣ ನೀಡಲಾಗಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಹಿಂದುಳಿದ ವರ್ಗ ದವರ ಪ್ರದೇಶಗಳಿಗೆ ಬಿಡುಗಡೆ ಮಾಡಿದ ಎರಡು ಲಕ್ಷ ರೂಪಾಯಿ ವೆಚ್ಚದ ವಿದ್ಯುತ್ ದೀಪ ಅಳವಡಿಕೆ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಲಾಯಿತು .

ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ ರಾಜ್ಯ ಸರ್ಕಾರದ ಆದೇಶದಂತೆ ವಿರಾಜಪೇಟೆ ನಗರದಲ್ಲಿ ಶೇಕಡ 60 ರಷ್ಟು ಕನ್ನಡ ದಲ್ಲಿ ನಾಮ ಪಾಲಕ ಮಾಡುವಂತೆ ಆದೇಶ ಕೂಡಲೆ ಹೊರಡಿಸಬೇಕು ರಾಜ್ಯ ಸರ್ಕಾರದ ಆದೇಶದಂತೆ, ಎರಡು ಬಾರಿ ಹೆಚ್ಚುವರಿಯಾಗಿ ಸಮಯ ನೀಡಿದ್ದರು ಇನ್ನೂ ಪೂರ್ಣವಾಗಿ ನಾಮಫಲಕ ಅಳವಡಿಸಿಲ್ಲ ಆದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿಕೊಂಡರು. ಇದಕ್ಕೆ ಸಿ ಕೆ ಪೃಥ್ವಿ ನಾಥ್ ರವರು ಸಲ್ಪ ಕಾಲವಕಶನ್ನು ನೀಡ ಬೇಕು ಎಂದರು. ಎರಡು ಬಾರಿ ಸರ್ಕಾರವೇ ಕಾಲಾವಕಾಶ ನೀಡಲಾಗಿದೆ ಆದರೂ ಯಾರು ಮುತ್ತು ಅರ್ಜಿ ವಹಿಸಿಲ್ಲ ಎಂದಾಗ ಈ ಸಂಧರ್ಬದಲ್ಲಿ ರಾಜೇಶ್ ಪದ್ಮನಾಭ ಹಾಗೂ ಪೃಥ್ವಿನಾಥ್ ಹಾಗೂ ಕೆಲವು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ಬಾರಿ ಕಾಲಾವಕಾಶ ನೀಡಿದ ವಿಚಾರ ನನಗೆ ತಿಳಿದಿಲ್ಲ ಎಂದು ಪೃಥ್ವಿನಾಥ ಸಭೆಯಲ್ಲಿ ತಿಳಿಸಿ ಒಂದು ತಿಂಗಳು ಕಾಲಾವಕಾಶ ಕೊಡಿ ಎಂದು ಕೋರಿಕೊಂಡರು. ತದನಂತರ ಅಧ್ಯಕ್ಷರು ಮಧ್ಯ ಪ್ರವೇಶ ಮಾಡಿ ಒಂದು ತಿಂಗಳ ಸಮಯ ಅವಕಾಶ ನೀಡುವಂತೆ ಸೂಚನೆ ನೀಡಿ ನಿರ್ಣಯ ಕೈಗೊಂಡರು .ವಿರಾಜಪೇಟೆ ತಹಶಿಲ್ದಾರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ದಾಖಲೆ ಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ಸಂಭೆಯಲ್ಲಿ ತಿಳಿಸಿದರು .ಸರ್ವ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು. ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಸಾರ್ವಜನಿಕರು ಉಪಯೋಗಕ್ಕೆ ಮತ್ತು ತೆರಿಯುವಂತೆ ಸದಸ್ಯರಾದ ಪೃಥ್ವಿನಾಥ್ ಹಾಗೂ ರಾಜೇಶ್ ಪದ್ಮನಾಭ ಅವರು ಕೋರಿಕೊಂಡರು, ಶಿವಕೇರಿಯಲ್ಲಿ ಲಾಡ್ಜ್ ಗೆ ಪರವಾನಿಗೆ ಪಡೆದುಕೊಂಡು, ಕೆಳಭಾಗದಲ್ಲಿ ವೃದ್ಧಾಶ್ರಮ ಎಂಬ ಬೋರ್ಡ್ ಹಾಕಿಕೊಂಡು, ಮೇಲ್ಭಾಗದಲ್ಲಿ ವಸತಿ ನಿಲಯವಾಗಿ ಮಾರ್ಪಟ್ಟು, ವೇಶ್ಯಾವಾಟಿಕೆ ದಂದೇ ನಡೆಸಲಾಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದವರ ಮೇಲೆ ಕೇರಳ ಮೂಲದ ಮೂವರು ಪ್ರಕರಣ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಕೂಡಲೇ ಮುಚ್ಚಿ ಸುವಂತೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು ಉಳಿದಂತೆ ಹಲವು ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

ಸಭೆಯಲ್ಲಿ ಉಪಧ್ಯಕ್ಷರಾದ ಫಸಿಯ ತಬಸಂ . ಮುಖ್ಯ ಅಧಿಕಾರಿ ಚಂದ್ರ ಕುಮಾರ್ ಪರಿಸರ ಅಭಿಯಂತರ ರಾದ ಶ್ರೀ ಮತಿ ರೀತ್ ಸಿಂಗ್.ಅಭಿಯಂತರಾದ ರಾಮಚಂದ್ರ. ಸದಸ್ಯರಾದ ರಂಜಿಪೂಣಚ್ಚ. ಆಗಸ್ಟಿನ್ ಬೆನ್ನಿ. ಮಹದೇವ. ಜಲೀಲ್ ಅಹಮದ್. ಶ್ರೀ ಮತಿ ಯಶೋಧ. ಶ್ರೀ ಮತಿ ಆಶಾ. ಶ್ರೀ ಮತಿ ಸುನೀತಾ .ಶ್ರೀ ಮತಿ ಅನೀತ ಕುಮಾರ್ ‌.ಮಾಜಿ ಅಧ್ಯಕ್ಷ ರಾದ ಸುಶ್ಮಿತಾ ಮಹೇಶ್. ಮಾಜಿ ಉಪಧ್ಯಕ್ಷರಾದ ನಿಶಾಂಕ್.ನಾಮ ನಿರ್ದೇಶನ ಸದಸ್ಯ ರಾದ ಜಿ ಜಿ ಮೋಹನ್ ಶಬರೀಶ್ ಶೆಟ್ಟಿ. ರವಿ. ಆತೀಫ್ ಮನ್ನಾ .ದಿನೇಶ್ ನಾಯರ್. ಸಾಹುಲ್ ಅಮೀದ್ ಶ್ರೀ ಮತಿ ಅನಿತಾ. ಪುರಸಭೆ ಸಿಬ್ಬಂದಿ ಗಳದ ಕೋಮಲ. ಸುಲೇಖ ಸೇರಿದಂತೆ ಹಾಜರಿದ್ದರು