ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರೈತರ ಗೋಳು ಕೇಳುವವರು ಯಾರು ಇಲ್ಲದಂತೆ ಆಗಿದೆ.

ಕಾಫಿ, ಕಾಳು ಮೆಣಸು ಜೊತೆ ಇದೀಗ ಅಡಿಕೆ ಬೆಳೆ ಕೈಗೆ ಬಂದರೂ ಬಾಯಿಗೆ ಬಾರದಂತೆ ಆಗಿದೆ. ಅಡಿಕೆ ಮರದ ಬುಡದಲ್ಲಿ ಅಡಿಕೆ ಒಂದೆಡೆ ಉದುರಿ ಬೀಳುತ್ತಿದೆ.

ಮತ್ತೊಂದೆಡೆ ಕಾಡಾನೆ ದಾಂದಲೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ರೈತರ ಬಗ್ಗೆ ಸರಕಾರ ಗಮನಹರಿಸಿ ಎಂದು ಬೆಳೆಗಾರರು ಕೊಡಗು ಜಿಲ್ಲಾ ಪ್ರತಿನಿಧಿಗಳಿಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಕಷ್ಟ ತೋಡಿಕೊಂಡು ಟ್ಯಾಗ್ ಮಾಡಲಾಗಿದೆ.