ಸಮಾಜದಲ್ಲಿ ಸಂಘರ್ಷಗಳು ನಡೆಯುವುದು ಸಹಜ ಅದರೇ ಚುನಾವಣಾ ಹೊಸ್ತಿಲಲ್ಲಿ ಸಂಘರ್ಷಗಳು ನಡೆದರೆ ಸಹನೆಯಿಂದ ಸ್ವೀಕರಿಸಿ ಚುನಾವಣೆ ಎದುರಿಸುವಾ…ಎಂದು ಕೆ.ಪಿ.ಸಿ.ಸಿ.ಕಾನೂನು ಘಟಕದ ರಾಜ್ಯ ಅದ್ಯಕ್ಷರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕರ್ತರು ಭಾ.ಜ.ಪ. ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸರಳ ಸಮಾರಂಭದಲ್ಲಿ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು ನಾವುಗಳು ಇಂದು ಚುನಾವಣಾ ಹೊಸ್ತಿಲಲ್ಲಿ ಇದ್ದೇವೆ.ಭಿನ್ನ ಪಕ್ಷದಲ್ಲಿ ಅಂತರಿಕ ಮತ್ತು ಇತರ ವಿಷಯಗಳ ಸಂಭಂದಿತ ವಿಚಾರಗಳಿಗೆ ಸಂಘರ್ಷಗಳು ನಡೆಯುವುದು ಸಹಜ ಅದರೆ ಪಕ್ಷದ ಕಾರ್ಯಕರ್ತರು ಸಹನೆ ಕಳೆದುಕೊಳ್ಳದೆ ಸಹನೆಯಿಂದ ವರ್ತಿಸಬೇಕು ಹಾಗೂ ಪಕ್ಷದ ಒಳಿತಿಗಾಗಿ ಪಕ್ಷದ ಅಭ್ಯರ್ಥಿಯನ್ನು ಜಯಗಳಿಸುವ ನಿಟ್ಟಿನಲ್ಲಿ ಸರ್ವರು ಶ್ರಮಿಸಬೇಕು. ಪಕ್ಷದ ತತ್ವ ಸಿದ್ದಾಂತಗಳನ್ನ ಮನ ಒಪ್ಪಿ ಪಕ್ಷಕ್ಜೆ ಸೇರ್ಪಡೆಗೊಂಡ ಯುವ ವಕೀಲ ಸಿ.ಕೆ.ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ರಾಜ್ಯ ವಕ್ತಾರರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ಇಂದು ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಂಡಿದೆ. ಜಿಲ್ಲೆಯ ಮೂಲಭೂತ ಸಮಸ್ಯೆಗಳಿಗೆ ತಾತ್ವಿಕ ಅಂತ್ಯ ಕಾಣಲು ಜಿಲ್ಲೆಯ ಘನವೆತ್ತ ಮತದಾರರ ಪ್ರಭುಗಳು ಕಾಯುತಿದ್ದಾರೆ.ಅದುದರಿಂದ ಕಾರ್ಯಕರ್ತರು ಶಕ್ತಿ ಮೀರಿ ಪಕ್ಷದ ಅಭ್ಯರ್ಥಿಯನ್ನು ಜಯಗಳಿಸಲು ಪ್ರತ್ನಿಸಬೇಕು ಎಂದು ಹೇಳಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಅವರ ಸಾನಿಧ್ಯದಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಭಾ.ಜ.ಪ ವಿರಾಜಪೇಟೆ ಮಂಡಲ ಸಾಮಾಜಿಕ ಜಾಲತಾಣದ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದ ವಕೀಲರಾದ ಚೋವಂಡ ಕೆ. ಪೊನ್ನಣ್ಣ ಅವರು ಭಾ.ಜ.ಪ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಅಪಾರ ಪ್ರಮಾಣದ ಬೆಂಬಲಿಗರೋಂದಿಗೆ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಪ್ರಮುಖರು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.