ಮಾರ್ಚ್ 10 ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅರಣ್ಯ ಇಲಾಖೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ತೆರಳುವ ಕರ್ನಾಟಕ ತಂಡಕ್ಕೆ ಕುಶಾಲನಗರದ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಟರ್ಫ್ ಮೈದಾನ ದಲ್ಲಿ ತರಬೇತಿ ಪಡುತ್ತಿದ್ದಾರೆ.
ಕೊಡಗಿನ ದರ್ಶನ್ ನಾಯಕತ್ವದ ಕರ್ನಾಟಕ ತಂಡದಲ್ಲಿ ರಾಜ್ಯದ ವಿವಿದೆಡೆಗಳಿಂದ 14 ಮಂದಿ ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ.
ತಂಡಕ್ಕೆ ಕೂಡಿಗೆ ಕ್ರೀಡಾಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತು ನೀಡುತ್ತಿದ್ದಾರೆ.
ಕರ್ನಾಟಕದ ತಂಡದ ವಿವರ:
ನಾಯಕ ದರ್ಶನ್ (ಕೊಡಗು),ಸಂಚಿತ್ ಸೋಮಯ್ಯ(ಕೊಡಗು),ಮಿಥಿನ್ ಶ್ರೀನಿವಾಸ್, ಶಾಯದ್ ಬಾಷಾ,ನವೀನ, ಎನ್ ಜಯಂತ್, ರಘು,ವಿನೋದ್ ಕುಮಾರ್ (ಧಾರವಾಡ),ಹೆಚ್.ಬಿ ಅನಿತ್ ರಾಜ್ (ಮೈಸೂರು),ಹರೀಶ್ ಕುಮಾರ್,ಶಶಿಕಾಂತ್ (ಹಾಸನ),ಎಲ್.ಜಿ ಚೇತನ್ (ಚಿಕ್ಕಮಗಳೂರು),ಗೋಲ್ ಕೀಪರ್ ಆರ್.ವಿನು (ಕೋಲಾರ)
ತಂಡ ತರಬೇತಿ ಪಡೆಯುತ್ತಿದ್ದಾರೆ.