ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಹಾಗೂ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಡಿಕೇರಿ ಬಾಹ್ಯ ಸೇವಾ ಕೇಂದ್ರ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಮಾರ್ಚ್, 03 ರಂದು ವಿಶ್ವ ಶ್ರವಣ ದಿನಾಚರಣೆ ನಡೆಯಲಿದೆ.
ಮಾರ್ಚ್, 03 ರಂದು ಬೆಳಗ್ಗೆ 9 ಗಂಟೆಗೆ ವಿಶ್ವ ಶ್ರವಣ ದಿನ/ ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನದ ಬಗ್ಗೆ ಬೀದಿ ನಾಟಕ, ಬೆಳಗ್ಗೆ 9.30 ಗಂಟೆಗೆ ಜಾಥ, ನಂತರ ಬೆಳಗ್ಗೆ 10.30 ಗಂಟೆಗೆ ಸಭಾ ಕಾರ್ಯಕ್ರಮವು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯ ಉಪನ್ಯಾಸ ಕೊಠಡಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.