ಕೊಡಗು: ಆಸ್ತಿ ವಿಚಾರವಾಗಿ ಕುಟುಂಬಸ್ಥರಿಂದಲೇ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಹರಿಹರ ಗ್ರಾಮದ ಕುಂದೂರು ನಿವಾಸಿ ಮನ್ನೇರ ಸಂತು ಸುಬ್ಬಯ್ಯ (39) ಕೊಲೆಯಾದ ವ್ಯಕ್ತಿ.
ಸಂಬಂಧಿಕನೇ ಆದ ಕಾಳಪ್ಪ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಈತನಿಗೆ ಸಹಕರಿಸಿದ ಸಂಪತ್ ಎಂಬಾತನನ್ನು ಶ್ರೀಮಂಗಲ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.