ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿಯಿಂದ ಹಾಸನದ ಅರಕಲಗೂಡಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಸೋಮವಾರಪೇಟೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿ ಸಹಿತ ಕೃತ್ಯಕ್ಕೆ ಬಳಸಿದ್ದ ವ್ಯಾನ್ ಮತ್ತು ಐದು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ತೋಳೂರು ಶೆಟ್ಟಳ್ಳಿಯ ಪುಟ್ಟಸ್ವಾಮಿ ಬಂಧಿತ ಆರೋಪಿಯಾಗಿದ್ದು, ಶನಿವಾರಸಂತೆ ಹುನಗುಂದಿ ಗ್ರಾಮದ ಚಿದಾನಂದ ಸೇರಿದಂತೆ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾರೆ.

ತೋಳೂರು ಶೆಟ್ಟಳ್ಳಿಯಿಂದ ಕೊಗೆಕೋಡಿಗೆ ಸಾಗಿಸಿ ಅಲ್ಲಿಂದ ಅರಕಲಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.