ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಬಸವೇಶ್ವರ ಬಡಾವಣೆ ಬಳಿಯಿರುವ ವೀರಭೂಮಿ ರಸ್ತೆಯಿಂದ ಮುಖ್ಯರಸ್ತೆಗೆ ತೆರಳಲು ವಾಹನಗಳಿಗೆ ಸಮಸ್ಯೆಯಾಗುತ್ತಿದ್ದ ಹಿನ್ನಲೆ ಸ್ಥಳೀಯ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಕೂಡ್ಲೂರು ಬಸವೇಶ್ವರ ಬಡಾವಣೆಯ ಯುವಕರು ಸ್ವತಃ ಚರಂಡಿಯಲ್ಲಿದ್ದ ದೊಡ್ಡದಾದ ಬಂಡೆಗಳನ್ನು ಹಾಗೂ ಮಣ್ಣನ್ನು ತೆರವುಗಳಿಸಿದರು.

ಹಾಗೆಯೇ ಮಳೆನೀರು ಸರಾಗವಾಗಿ ತೆರಳು, ವೀರಭೂಮಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣಿನ ಚರಂಡಿಯನ್ನು ನಿರ್ಮಿಸಲಾಯಿತು. ನಂತರ ವಾಹನಗಳು ಮುಖ್ಯ ರಸ್ತೆಗೆ ತೆರಳಲು, ಚರಂಡಿ ಮೇಲ್ಭಾಗದಲ್ಲಿ ಸ್ಲಾಬ್ ಅಳವಡಿಸಲಾಯಿತು.