ಪೊನ್ನಂಪೇಟೆ ಎಪಿಸಿಎಂಎಸ್ ಮುಂಭಾಗ ವೇಗನರ್ ಕಾರು ಒಂದು ಇಂದು ಬೆಳಿಗ್ಗೆ 7:30 ಗಂಟೆಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕೀಡಾಗಿದೆ.
ಕಾರಿನೊಳಗಿದ್ದ ನಾಲ್ವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಸಮೀಪದ ರಾಮಕೃಷ್ಣ ಸೇವಾ ಆಶ್ರಮದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೇಗನರ್ ಕಾರು ಕುಟ್ಟ ರಸ್ತೆಯಿಂದ ಪೊನ್ನಂಪೇಟೆ ಕಡೆಗೆ ಬರುತ್ತಿದ್ದಾಗ ಎಡಭಾಗದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಎಪಿಸಿಎಂಎಸ್ ಕಟ್ಟಡದಲ್ಲಿದ್ದ ಎಳನೀರು ಅಂಗಡಿಗೆ ಕೂಡ ನುಗ್ಗಿದೆ. ಹೆಚ್ಚಿನ ಅನಾಹುತ ಏನು ಸಂಭವಿಸಿಲ್ಲ.