ಸುಂಟಿಕೊಪ್ಪ – ಮಡಿಕೇರಿ ಹೆದ್ದಾರಿ ನಡುವಿನ ಕೆದಕಲ್ ನಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮರವೊಂದು ಬಿದ್ದಿದ್ದು ಬಾರೀ ಅನಾಹುತ ತಪ್ಪಿದೆ. ಇದೇ ಸಮಯದಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ಸಂಚರಿಸುತ್ತಿದ್ದು ಈ ಎರಡು ವಾಹನಗಳ ನಡುವೆ ಮರ ಧರಷಾಹಿ ಆಗಿದೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಆಟೋ ರಿಕ್ಷಾ ಚಾಲಕ ಮತ್ತು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮರವನ್ನು ಕತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.