ಚುನಾವಣೆಯ ಅಂತಿಮ ಕ್ಷಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಹಣ ಪಡೆದು ಮಡಿಕೇರಿ ವಿಧಾನಸಭಾಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಬುಕ್ ಆಗಿದ್ದಾರೆ ಎಂದು ಕೇಳಿ ಬರುತ್ತಿರುವ ಮಾತಿಗೆ, ಸ್ವತಃ ನಾಪಂಡ ಮುತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದಲಿಂಗಪುರದ ತಮ್ಮ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಜೆಢಿಎಸ್ ಜಿಲ್ಲಾಧ್ಯಕ್ಷ ಸೇರಿದಂತೆ ಕೆಲವು ಪ್ರಮುಖರ ಪಕ್ಷ ನಿಷ್ಠೆ ಕೊರತೆ,ಅಸಹಕಾರ ಮತ್ತು ಕೊನೆಯ ಗಳಿಗೆಯಲ್ಲಿ ಆರ್ಥಿಕ ಸಂಪನ್ಮೂಲ ಕೊರತೆ ಪರಿಣಾಮ ತಟಾಸ್ಥವಾಗಿರಬೇಕಾಯಿತು. ಇತರೆ ಪಕ್ಷದಿಂದ ಹಣ ಪಡೆದಿದ್ದರೆ ಧರ್ಮಸ್ಥಳ ಕ್ಷೇತ್ರದಲ್ಲಿ ಆಣೆಪ್ರಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ.