ಸೋಮವಾರಪೇಟೆ ತಾಲ್ಲೂಕಿನ ಹುದುಗೂರು ನಲ್ಲಿ ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮೆರ್ಸ್ ಅಸೋಶಿಷನ್ಮತ್ತು ಕಾಳಿಕಾಂಬ ಯುವಕ ಸಂಘದ ವತಿಯಿಂದ ಏಳನೇ ವರ್ಷದ ನಾಟಿ ಹಬ್ಬ ಆಯೋಜಿಸಲಾಗಿತ್ತು.

ಕೆಸರು ಗದ್ದೆಗೆ ಇಳಿದು ನಾಟಿ ಮಾಡಿದ ಸಂಸದ ಯಧುವೀರ್ ಒಡೆಯರ್ ಹಬ್ಬಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ದೇಶದ ಅಭಿವೃದ್ಧಿ ದೃಷ್ಠಿಯಿಂದ ಕೃಷಿ ಮಹತ್ವದ ಸ್ಥಾನ ಪಡೆಯುತ್ತದೆ, ಉದ್ಯೋಗ ಅರಸಿ ಗ್ರಾಮ ತೊರೆದು ನಗರಕ್ಕೆ ತೆರಳುವ ಯುವಕರು ಕೃಷಿ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.