ಕೊಡವ ಕೂಟಾಳಿಯಡ ಕೂಟ ಸಂಘಟನೆಯ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ಗುರುವಾರ ಪೊನ್ನಂಪೇಟೆಯ  ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಸಂಘಟನೆಯ  ಅಧ್ಯಕ್ಷರಾಗಿದ್ದ ಚೆಟ್ಟೋಳಿರ  ಶರತ್ ಸೋಮಣ್ಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಸಂಘಟನೆಯ ನೂತನ ಅಧ್ಯಕ್ಷರಾಗಿ  ಚೊಟ್ಟಂಡ ಪ್ರಭು ಸೋಮಯ್ಯ ಉಪಾಧ್ಯಕ್ಷರಾಗಿ ಚೆಕ್ಕೆರ ರಾಜೇಶ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿ ಮಾಚಿಮಡ ಡಿಂಪಲ್ ರವರು ನೇಮಕಗೊಂಡರು.

ಸಂಘಟನೆಯ ನಿರ್ದೇಶಕರುಗಳಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್,  ಚೇಂದಿರ ಪ್ರಿಯಾ ಲೋಹಿತ್, ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತ ವಾಸುದೇವ, ಅಜ್ಜಮಾಡ ಸಾವಿತ್ರಿ, ಬೊಜ್ಜಂಗಡ ಭವ್ಯ ದೇವಯ್ಯ, ಇಟ್ಟಿರ ಭವ್ಯ ಈಶ್ವರ್, ಪಾಂಡಿರ ದಿವ್ಯ ಉತ್ತಪ್ಪ, ಚಕ್ಕೆರ ಹೇಮಾ, ಆಯ್ಕೆ ಗೊಂಡರು.
ನೂತನ ಅಧ್ಯಕ್ಷರು ಮಾತನಾಡುತ್ತಾ, ಕಳೆದ ಐದು ವರ್ಷಗಳಿಂದ ಈ ಸಂಘಟನೆಯು ಹಲವಾರು ಕೊಡವ ಜನಾಂಗದವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದೆಯೂ ಸಂಘಟನೆಯಲ್ಲಿ ಎಲ್ಲರ ಸಲಹೆ ಸಾಕಾರದ ವಿನೂತನ ಕಾರ್ಯಕ್ರಮಗಳು ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸದಸ್ಯೆ ಚೋವಂಡ ಜಮುನಾ ಸುರೆಶ್’ರವರು ಪ್ರಾರ್ಥಿಸಿದರು. ಕಾರ್ಯದರ್ಶಿ ಕಬ್ಬಚ್ಚಿರ ಕಾರ್ಯಪ್ಪ ನವರು ವಾರ್ಷಿಕ ವರದಿ ವಾಚಿಸಿ, ಆನಂತರ ವಂದಿಸಿದರು. ಖಜಾಂಚಿ ಬೊಜ್ಜಂಗಡ ಭವ್ಯ ಲೆಕ್ಕಪತ್ರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆ  ಚಿಮ್ಮಚ್ಚಿರ ಪವಿತ ರಜನ್, ಗೌರವಾದ್ಯಕ್ಷ  ಚಂಗುಲಂಡ ಸೂರಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.