ಕುಶಾಲನಗರದ ಟೀಂ ಆಟಿಟ್ಯೂಡ್ ಕಲ್ಚರ್ ಅಕಾಡೆಮಿ ವತಿಯಿಂದ ದ ಸೀಜನ್-7 ರ ಬೇಸಿಗೆ ಶಿಬಿರದ ಅಂಗವಾಗಿ ಇಲ್ಲಿನ ಕಲಾಭವನ ಎದುರಿನಲ್ಲಿ ಕಾವೇರಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ವತಃ ಶಿಬಿರಾರ್ಥಿಗಳು ಗಿಡ ನೆಟ್ಟು ಸಂಭ್ರಮಿಸಿದರು, ಇದಕ್ಕೂ ಮೊದಲು ಮಾತನಾಡಿದ ಕಾವೇರಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಹಾಗು ಹಿರಿಯ ಪತ್ರಕರ್ತ ಎಂ.ಎನ್ ಚಂದ್ರಮೋಹನ್ ಮಾತನಾಡಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಮುಖ್ಯ ಹಾಗಾಗಿ ಗಿಡ ಮರಗಳನ್ನು ಹೆಚ್ಚು ನೆಡುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ನಮ್ಮ ಕರ್ತವ್ಯ ಎಂದರು.