ಕೇಂದ್ರೀಯ ಅಥ್ಲೇಟಿಕ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ 2023ನೇ ಸಾಲಿನ 42ನೇ ಕ್ರೀಡಾಕೂಟ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು.

ಕುಶಾಲನಗರ ತಾಲ್ಲೂಕಿನ ಹಿರಿಯ ಓಟಗಾರ ತೊರೆನೂರು ಗ್ರಾಮದ 45+ ವರ್ಷ ಮೇಲ್ಪಟ್ಟ ವಿಭಾಗದ ರಸ್ತೆ ಓಟದಲ್ಲಿ ಗಣೇಶ್ ಟಿ.ಹೆಚ್ 1500 ಮೀಟರ್ ಓಟದಲ್ಲಿ ಪಾಲ್ಗೊಂಡು 5:13.4 ಸೆಕಂಡ್ ನಲ್ಲಿ ಗುರಿ ತಲುಪುವ ಮೂಲಕ ದಾಖಲೆ ಮಾಡಿದ್ದಾರೆ.

ಇದಲ್ಲದೆ, 800 ಮೀ.ದ್ವಿತೀಯ, 5000 ಮೀ.ದ್ವಿತೀಯ, 10,000 ಮೀ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.