ಸಹಜವಾಗಿ ವನ್ಯಜೀವಿಗಳ ದರ್ಶನ ಪಡೆಯಬೇಕೆಂದರೆ ಮುಲಾಜಿಲ್ಲದೆ, ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಾಬೆಟ್ಟ ಪ್ರದೇಶಗಳಿಗೆ ತಂಡ ಕಟ್ಟಿಕೊಂಡು, ಕೈನಲ್ಲಿ ಕ್ಯಾಮೆರಾ ಹಿಡಿದು ವಾರಾನುಗಟ್ಟಲೆ ಕಾದು ಟಿಕೆಟ್ ಪಡೆದೋ ಇಲ್ಲ ಅಧಿಕಾರಿಗಳ ಇನ್ಫುಲೆನ್ಸ್ ಪಡೆದು ಸಫಾರಿ ಹೋಗಿ ತಂಗಲು ಸರ್ಕಾರಿ ಕಾಟೇಜ್ ಬುಕ್ ಮಾಡಿ ಒಂದೆರಡು ದಿನ ಎಂಜಾಯ್ ಮಾಡಿ ಹೋಗುವವರೇ ಹೆಚ್ಚು.

ಈ ಜಂಜಾಟ ಬೇಡ ಮೈಸೂರ್ ಮೃಗಾಲಯ, ಬನ್ನೇರ್ಘಟ್ಟ, ಆನೆ ಸಫಾರಿ ಅಂತ ಸಕ್ರೆಬೈಲು, ದುಬಾರೆ. ಹೌದು ಇಷ್ಟಕ್ಕೆ ನಮ್ಮ ಜನ ಸೀಮಿತರಾಗಿದ್ದಾರೆ.

ಆದ್ರೆ ನಮ್ಮ ನಿಮ್ಮೆಲರ ಉಸಿರಾಟಕ್ಕೆ ಶುದ್ಧಗಾಳಿ,  ನೀಡಲು ಹಸುರಿನ ಮರ ಗಿಡಗಳು, ಅವುಗಳ ಮಧ್ಯೆ ಬಣ್ಣ ಬಣ್ಣದ ಹೂವುಗಳು ಸಹಜವಾಗಿಯೇ ಕಂಗೊಳಿಸುತ್ತವೆ. ಆದ್ರೆ ಪ್ರಕೃತಿಯನ್ನು ಈ ರೀತಿ ಸೃಷ್ಟಿ ಮಾಡುವುದಾದರು ಯಾರು ಹೇಳಿ, ಅವುಗಳೇ ಹಾರುವ ಆಭರಣಗಳು ಅರ್ಥತ್ ಚಿಟ್ಟೆಗಳು, ಪತಂಗಗಳು.

ಜೋಯಿಡಾ, ಉತ್ತರ ಕರ್ನಾಟಕ ಜಿಲ್ಲೆಯ ತಾಲ್ಲೂಕು ಕೇಂದ್ರ. ಸೂಪಾ ಎಂದು ಕರೆಲ್ಪಡುತ್ತಿದ್ದ ಈ ಪ್ರದೇಶ ಪಶ್ಚಿಮ ಘಟ್ಟದ ದಿಂದ ಹರಿದು ಬರುವ ಕಾಳಿ ನದಿಯ ಪ್ರವಾಹಕ್ಕೆ ಸಂಪೂರ್ಣ ಮುಳುಗಡೆಯಾಗಿ ಜೋಯಿಡಾ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿನ ಹಳಿಯಾಳ ಅರಣ್ಯ ವಲಯವೇ ಕೇಂದ್ರಬಿಂದು.

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿರುವ 45 ಎಕರೆ ವೃಕ್ಷ ಉದಾನವನದಲ್ಲಿದೆ ರಾಜ್ಯದ ಮೊತ್ತಮೊದಲ ಚಿಟ್ಟೆ ಪಾರ್ಕ್. ಸುಮಾರು 5 ಎಕರೆ ವಿಸ್ತೀರ್ಣ ದಲ್ಲಿರುವ ಈ ಪಾರ್ಕ್. ಮಕರಂದ ಉತ್ಪದಿಸುವ ಹೂವಿನ ಗಿಡಗಳು, ಔಷಧೀಯ ಸಸ್ಯಗಳನ್ನು ಒಳಗೊಂಡಿರುವ ಈ ಪಾರ್ಕ್ ನಲ್ಲಿ 35 ಬಗೆಯ ಚಿಟ್ಟೆಗಳನ್ನು ನೋಡಬಹುದಾಗಿದೆ.

ಅದರಲ್ಲೂ ಸದರನ್ ಬರ್ಡ್ ವಿಂಗ್ ಮತ್ತು ಬ್ಲೂ ಮೊರ್ಮೋನ್ ಪ್ರಮುಖವಾಗಿ ಕಾಣಲು ಸಿಗುತ್ತದೆ. ಶಿರಸಿ ಮತ್ತು ಅಂಶಿ ಭಾಗದ ಅಪರೂಪದ ಸಸ್ಯ ಪ್ರಭೇದಗಳನ್ನೂ ಪೋಷಣೆ ಮಾಡಲಾಗುತ್ತಿದೆ.

ಚಿಟ್ಟೆಗಳ ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣ ಅರಣ್ಯ ಇಲಾಖೆ ಮಾಡಿಕೊಂಡಿದೆ. ವನ್ಯಜೀವಿಗಳ ಪ್ರಮುಖ ಭಾಗವಾಗಿರುವ ಚಿಟ್ಟೆಗಳ ಬಗ್ಗೆ ಅರಿವು ಮೂಡಬೇಕಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಲೇ ಬೇಕು. ದಿನನಿತ್ಯ ಬೆಳೆಗ್ಗೆ 9 ರಿಂದ 5 ಗಂಟೆವರೆಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿದೆ.