ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಇಂದು ಶ್ರೀ ದುರ್ಗ ಲಕ್ಷ್ಮಿ ದೇವಿಯ ಪ್ರತಿಷ್ಠಾಪನ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ನಡೆಯಿತು.
ವೈದೀಕ,ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ,ಆದಿವಾಹನ ವಿಡರ್ತಿ ಪೂಜೆ, ಅಯ್ಯಪ್ಪ ಸ್ಚಾಮಿಯ ಬ್ರಹ್ಮಕಲಶ ಪೂಜೆ, ಭಗವತಿಯ ಬ್ರಹ್ಮಕಲಶ ಪೂಜೆ,ಗಣಪತಿಯ ಬ್ರಹ್ಮಕಲಶ ಪೂಜೆ, ಗಣಪತಿಯ ಬ್ರಹ್ಮ ಕಲಶಾಭಿಷೇಕ, ಭಗವತಿಯ ಪ್ರಸಾದ ಪ್ರತಿಷ್ಠೆ, 12 ಗಂಟೆಯ ಶುಭ ಮುಹೂರ್ತದ ಕುಂಭ ಲಗ್ನದಲ್ಲಿ ದುರ್ಗಾಲಕ್ಷ್ಮಿದೇವಿಯ ಪ್ರತಿಷ್ಟೆ, ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅಯ್ಯಪ್ಪ ಸ್ವಾಮಿಯ ಕಲಶಾಭಿಷೇಕ, ಮಹಾಪೂಜೆ, ಬಳಿಕ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ನಾಳೆ ಮಂಡಲ ಪೂಜೆ ; ಕ್ಷೇತ್ರದ 54 ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಹಾಗೂ ಅನ್ನದಾನವು ಡಿ.26 ರಂದು ನಡೆಯಲಿದೆ.
ಗುರುವಾರ ಬೆಳಿಗ್ಗೆ 6.45 ರಿಂದ ಗಣಪತಿ ಹೋಮ,7.15 ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ,7.30 ಕ್ಕೆ ಚಂಡೆಮೇಳ, 9 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಭಿಷೇಕ, 11.30 ಕ್ಕೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ಮದ್ಯಾಹ್ನ 12.30ಕ್ಕೆ ಅಯ್ಯಪ್ಪ ಸ್ವಾಮಿಗೆ ಪಲ್ಲಪೂಜೆ,1 ಗಂಟೆಗೆ ಮಹಾಪೂಜೆ ಮತ್ತು ಗಂಭೀರ ಪಟಾಕಿ ನೆರವೇರಲಿದೆ.
ದಿನದ ಅಂಗವಾಗಿ ಬಿಲ್ವಪತ್ರೆ ಅರ್ಚನೆ,ತುಳಸಿ ಅರ್ಚನೆ,ಪಂಚಾಮೃತ ಅಭಿಷೇಕ ಹಾಗೂ ದೂರ್ವಚನೆ ಸೇರಿದಂತೆ ವಿಶೇಷ ಪೂಜೆಗಳು ನಡೆಯಲಿದೆ.
ನಂತರ ನೆರೆದಿರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.