ಇದು ಗಾಳಿಬೀಡು -ಒಂದನೇ ಮೊಣ್ಣಂಗೇರಿ ರಸ್ತೆ. ಈ ವ್ಯಾಪ್ತಿಯಲ್ಲಿ ಸುಮಾರು 26 ಮನೆಗಳಿವೆ. ಇವರಿಗೆಲ್ಲಾ ಇದೇ ಏಕೈಕ ರಸ್ತೆ ಆಸರೆ ಆಗಿರುವುದು. ಮೊದಲೇ ಹಾದಿಯುದ್ಧಕ್ಕೂ ಡಾಂಬರು ಮಾಯವಾಗಿ ಅಲ್ಲಲ್ಲಿ ಹೊಂಡಗಳಿಂದ ಆವೃತವಾಗಿದೆ.
ಈ ನಡುವೆ ಫೈರಿಂಗ್ ರೇಂಜ್ ಜಾಗದಲ್ಲಿ ಖಾಸಗಿ ರೆಸಾರ್ಟ್ ವೊಂದರ ನಿರ್ಮಾಣದ ಕಾಮಗಾರಿ ಭರದಿಂದ ನಡೆಯುತ್ತಿದೆ.
ಕಲ್ಲು, ಸಿಮೆಂಟ್, ಜಲ್ಲಿ ಸಾಗಿಸುವ ಬಾರಿ ವಾಹನಗಳ ಬಾರವನ್ನು ತಾಳಲಾರದೇ ರಸ್ತೆ ಇನ್ನಷ್ಟು ಅದ್ವಾನಕ್ಕೀಡಾಗಿ ಇತರೆ ವಾಹನಗಳ ಹಾಗೂ ಗ್ರಾಮಸ್ಥರ ಸಂಚಾರಕ್ಕೆ ತೊಡಕ್ಕಾಗಿ ಪರಿಣಮಿಸಿದೆ.
ಇತ್ತೀಚಿಗೆ ಕಾಂಕ್ರಿಟ್ ಮಿಕ್ಸರ್ ಲಾರಿ ನಿಯಂತ್ರಣ ಕಳೆದುಕೊಂಡು ಬದಿಗೆ ಜಾರಿ ಬಿದ್ದು ಪಂಚಾಯಿತಿಯ ರಸ್ತೆಯನ್ನು ಹಾಳುಗೆಡವಿದೆ. ರೆಸಾರ್ಟ್ ನಿರ್ಮಾಣದ ಸಾಮಾಗ್ರಿಗಳನ್ನು ಸಾಗಿಸುತ್ತಿರುವ ವಾಹನಗಳಿಂದಾಗಿ ಈ ರಸ್ತೆ ನಾಮಾವಶೇಷವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು,” ರಾಷ್ಟ್ರ ಪ್ರಶಸ್ತಿ ಪಡೆದಿರುವ ಗಾಳಿಬೀಡು ಗ್ರಾಮ ಪಂಚಾಯಿತಿ, ರೆಸಾರ್ಟ್ ಮಾಲೀಕರಿಂದಲೇ ಈ ರಸ್ತೆಯನ್ನು ಸರಿಪಡಿಸುವ ಮೂಲಕ ರಾಷ್ಟ್ರಪ್ರಶಸ್ತಿಗೆ ಸಾರ್ಥಕತೆಯನ್ನು ತಂದುಕೊಡಲಿ” ಎಂದು ಆಗ್ರಹಿಸಿದ್ದಾರೆ.