ನಾಪೋಕ್ಲು ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ವಾರ್ಷಿಕ ಉತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.ಬೆಳಗಿನಿಂದಲೇ ಸನ್ನಿಧಿಯಲ್ಲಿ ಶಾಸ್ತಾವು ದೇವರಿಗೆ ವಿವಿಧ ಧಾರ್ಮಿಕ ಕಾರ್ಯಗಳು, ಕೋಲಗಳು ನೆರವೇರಿದವು.

ಬೆಳಗ್ಗೆ ಅಜ್ಜಪ್ಪ ಕೋಲ,ಮಧ್ಯಾಹ್ನದ ಬಳಿಕ ವಿಷ್ಣುಮೂರ್ತಿ ಕೋಲ ನಡೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕೋಲಾಗಳಿಗೆ ಸಾಕ್ಷಿಯಾದರು.ಉತ್ಸವದ ಅಂಗವಾಗಿ ಭಕ್ತರು ವಿವಿಧ ಹರಿಕೆ ಮತ್ತು ಮಣ್ಣಿನ ನಾಯಿಯನ್ನು ಅರ್ಪಿಸುವ ಹರಕೆ ತೀರಿಸಿದರು.

ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಮಧ್ಯಾಹ್ನ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಅಂತಿಮವಾಗಿ ದೇವಾಲಯದ ಆವರಣದಲ್ಲಿ ಬೆಳ್ಳಿ ಮುಖವಾಡ ಧರಿಸಿ, ವಿಷ್ಣುಮೂರ್ತಿ ಕೋಲ ಪ್ರದಕ್ಷಿಣೆ ಬರುವ ಮೂಲಕ ಉತ್ಸವಕ್ಕೆ ತೆರೆ ಬಿತ್ತು.