ಕೊಡಗು ಜಿಲ್ಲೆಯ ಸೋಮವಾರಪೇಟೆ ಕಂದಾಯ ಕಚೇರಿಯಲ್ಲಿ ಇತ್ತೀಚಿಗೆ ವರ್ಗಾವಣೆಯಾಗಿ ಬಂದಿರುವ ಸುಬ್ಬಯ್ಯನವರು ಯಾವುದೇ ಕೆಲಸ ಮಾಡದೆ ಸುಖಾ ಸುಮ್ಮನೆ ರಜಾ ಮಾಡಿಕೊಂಡು ಬಡವರ ಕಡತಗಳು ಒಂದು ವರ್ಷದ ಮುಂದುವರಿಸದೆ ಕೊಳೆಯುವಂತಾಗಿದೆ.
ಹಾಗಾಗಿ ಬೇಗನೆ ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಂಡು ಕೆಲಸ ಆಗುವಂತೆ ಮಾಡಿ ಕೊಡುವಂತೆ ಮನವಿ ಕರವೇ ಮನವಿ ಮಾಡಿದೆ.
ಒಂದು ವಾರದಲ್ಲಿ ತಿಂಗಳಿಗೆ 15 ದಿವಸ ಮಾತ್ರ ಕಚೇರಿಗೆ ಹಾಜರಾಗುವ ಹಿನ್ನಲೆಯಲ್ಲಿ ಅನೇಕ ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿದೆ. ಫೋನ್ ನಲ್ಲೂ ಉಡಾಫೆ ಉತ್ತರ ನೀಡುತ್ತಿದ್ದು, ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವ ಎಚ್ಚರಿಕೆ ನೀಡಿದ್ದಾರೆ.