ಡಿಸೆಂಬರ್ 14 ಮತ್ತು 15 ರಂದು ಗೋವಾದಲ್ಲಿ ನಡೆದ ಓಪನ್ ಬ್ಯಾಂಡಿ ಆಫ್ ಐಸ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಕೊಡಗಿನ ತಂಡ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಈ ತಂಡ ಪಾಲ್ಗೊಳ್ಳಲ್ಲಿದೆ. ತಂಡದ ತರಬೇತುದಾರ ಅನೂಪ್ ಡಿಸೋಜ, ಕೊಡಗಿನ ಬ್ಯಾಂಡಿ ಕೋಚ್ ಸಾವಿಯೋ ಅವರಿಗೆ ಕರ್ನಾಟಕ ಬ್ಯಾಂಡಿ ಜೆನರಲ್ ಸೆಕ್ರೆಟರಿ ಗುರುಮೂರ್ತಿ ಸಂಪೂರ್ಣ ತಂಡಕ್ಕೆ ಅಭಿನಂದಿಸಿದರು.