ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭಾರಣ ಅಡವಿಟ್ಟು ಸಾಲ ಪಡೆಯುತ್ತಿದ್ದ ಪ್ರಕರಣದ ಸಂಬಂಧ, ಜಾಲದ ಹಿಂದೆ ಇದ್ದ ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿ ಇತರೆ ಆರೋಪಿಗಳನ್ನು ಕೊಡಗು ಪೊಲೀಸ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ (ಕೆಡಿಸಿಸಿ) ಮಡಿಕೇರಿ ಮುಖ್ಯ ಶಾಖೆಯಲ್ಲಿ ಇದೇ ಡಿಸೆಂಬರ್ 04 ರಂದು ಮೊಹಮ್ಮದ್ ರಿಜ್ವಾನ್.ಕೆ.ಎ ಇವರು 08 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಆಭರಣವನ್ನು ಪರಿಶೀಲಿಸಲನೆ ಮಾಡಿ ನಕಲಿ ಆಭರಣ ಎಂದು ತಿಳಿದುಬಂದಿದ್ದು. ಇದೇ ರೀತಿಯಲ್ಲಿ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ & ಮಹಮ್ಮದ್ ಅನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ & ಹಂಸ ಎಂಬುವವರುಗಳು ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕಡಂಗ ಗಳಲ್ಲಿನ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಭಾಗಮಂಡಲದ ವಿಎಸ್ಎಸ್ಎನ್ ಬ್ಯಾಂಕ್ಗಳಲ್ಲಿ ಒಟ್ಟು 625 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ಒಟ್ಟು ರೂ.34, 95,016/- ಹಣವನ್ನು ಸಾಲವಾಗಿ ಪಡೆದಿದ್ದು,ಪ್ರಕರಣದ ವಿಚಾರಣೆ ಸಂದರ್ಭ ಕೇರಳ ರಾಜ್ಯ ಮಲ್ಲಪುರಂ ಜಿಲ್ಲೆ ನಿವಾಸಿ ನವಾಜ್, 47 ವರ್ಷ ಎಂಬಾತನು ನಕಲಿ ಚಿನ್ನವನ್ನು ನೀಡಿರುವುದು ಕಂಡುಬಂದಿದೆ
ಮುಂದಿನ ತನಿಖೆಯಲ್ಲಿ ಈ ಕೃತ್ಯದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಮೊಹಮ್ಮದ್ ಕುಂಞ, 48 ವರ್ಷ, ಅಕ್ಕಸಾಲಿಗ ವೃತ್ತಿ ಈತನು ಪ್ರದೀಪ್, 60 ವರ್ಷ ಎಂಬಾತನಿಗೆ ಹಣವನ್ನು ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸಿರುವುದು ಕಂಡಬಂದಿದೆ,ಮಾಸ್ಟರ್ ಮೈಂಡ್ ಮೊಹಮ್ಮದ್ ಕುಂಞ ಈತನಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತನು ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡಿರುವುದು ತನಿಖೆ ಸಂದಭ೯ ತಿಳಿದುಬಂದಿದೆ,ಪ್ರದೀಪ್ ವಿರುದ್ದ ಮೇಲೆ 2024 ನೇ ಸಾಲಿನಲ್ಲಿ 3 ಪ್ರಕರಣಗಳು, ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತದೆ ನಿರುದ್ ವಿರುದ್ದ 1 ದರೋಡೆ ಪ್ರಕರಣ, ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳು ವಿಚಾರಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗ ಪಡಿಸಿಕೊಂಡು ವಿಚಾರಣೆ ಮುಗಿಯುವ ವೇಳೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಇದೇ ರೀತಿಯ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಯ ಕಲಂ: 111 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.ಸದರಿ ಆರೋಪಿಗಳಿಗೆ ಕಲಂ 111 ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಕನಿಷ್ಠ 05 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದ್ದು,ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು ಎಂದು ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್ ಹೇಳಿದ್ದಾರೆ,.

ಮಡಿಕೇರಿ ನಗರ, ವಿರಾಜಪೇಟೆ ನಗರ, ಭಾಗಮಂಡಲ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್
ಠಾಣೆಗಳಲ್ಲಿ ಒಟ್ಟು 08 ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ ವಿಶೇಷ ತನಿಖಾ ತಂಡದ ಇಂತಿದೆ ;

  1. ಶ್ರೀ ಮಹೇಶ್ ಕುಮಾರ್, ಡಿಎಸ್ಪಿ ಮಡಿಕೇರಿ ಉಪವಿಭಾಗ,
  2. ಶ್ರೀ ರವಿ, ಡಿಎಸ್ ಪಿ, ಸೆನ್ ಪೊಲೀಸ್ ಠಾಣೆ.
  3. ಶ್ರೀ ರಾಜು.ಪಿ.ಕೆ, ಸಿಪಿಐ, ಮಡಿಕೇರಿ ನಗರ ವೃತ್ತ,
  4. ಶ್ರೀ ಅನೂಪ್ ಮಾದಪ್ಪ.ಪಿ, ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ
  5. ಶ್ರೀ ಮೇದಪ್ಪ, ಪಿಐ, ಡಿಸಿಆರ್.ಬಿ, ಕೊಡಗು ಜಿಲ್ಲೆ.
  6. ಶ್ರೀ ಲೋಕೇಶ್, ಪಿಎಸ್ಐ, ಮಡಿಕೇರಿ ನಗರ ಪ್ರೊ.ಠಾ,
  7. ಶ್ರೀಮತಿ ಶೋಭಾ ಲಾಮಣಿ, ಪಿಎಸ್ಐ, ಭಾಗಮಂಡಲ ಪೊ.ತಾ,
  8. ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು
  9. ಡಿಸಿಆರ್ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳು.
    ಚಿನ್ನಾಭರಣಗಳನ್ನು ಆಡಮನ ಮಾಡಿ ಸಾಲ ಪಡೆದ ವಿವರ;
    625 ಗ್ರಾಂ ತೂಕದ ನಕಲಿ ಚಿನ್ನಾಭರಣ ಮೌಲ್ಯ ರೂ. 34,95,016/-
    ಆರೋಪಿಗಳ ವಿವರ;
  10. ಮೊಹಮ್ಮದ್ ರಿಜ್ವಾನ್.ಕೆ.ಎ, 35 ವರ್ಷ, ಕುಂಜಿಲ ಗ್ರಾಮ ಕಕ್ಕಬ್ಬೆ.
  11. ರಿಯಾಜ್ಪಿ.ಹೆಚ್ 39 ವರ್ಷ, ಪಡಿಯಾನಿ ಎಮ್ಮೆಮಾಡು ಗ್ರಾಮ, ನಾಪೋಕ್ಲು.
  12. ಅಬ್ದುಲ್ ನಾಸೀರ್, 50 ವರ್ಷ, ಕುಂಜಿಲ ಗ್ರಾಮ ಕಕ್ಕಬ್ಬೆ.
  13. ನವಾಸ್.ಕೆ.ಪಿ, 47 ವರ್ಷ, ಮಲಪುರಂ ಜಿಲ್ಲೆ, ಕೇರಳ ರಾಜ್ಯ,
  14. ನಿಶಾದ್.ಕೆ.ಎ, 43 ವರ್ಷ, ಎರ್ನಾಕುಲಂ ಜಿಲ್ಲೆ, ಕೇರಳ ರಾಜ್ಯ
  15. ಮಹಮ್ಮದ್ ಕುಂಞ.ಸಿ.ಎಂ. 48 ವರ್ಷ, ಎರ್ನಾಕುಲಂ ಜಿಲ್ಲೆ, ಕೇರಳ ರಾಜ್ಯ
  16. ಪ್ರದೀಪ್.ಪಿಜೆ, 60 ವರ್ಷ, ಎರ್ನಾಕುಲಂ ಜಿಲ್ಲೆ. ಕೇರಳ ರಾಜ್ಯ.
    8.
    ಮೂಸಾ.ಬಿ.ಎ, 37 ವರ್ಷ, ಪಡಿಯಾನಿ ಎಮ್ಮೆಮಾಡು ಗ್ರಾಮ, ನಾಪೋಕ್ಲು.
  17. ಮಹಮ್ಮದ್ ಅನೀಫ್.ಎಂ.ಎಂ, 42 ವರ್ಷ, ಪಡಿಯಾನಿ ಎಮ್ಮೆಮಾಡು ಗ್ರಾಮ, ನಾಪೋಕ್ಲು.
  18. ಖತೀಜಾ, 32 ವರ್ಷ, ಪಡಿಯಾನಿ ಎಮ್ಮೆಮಾಡು ಗ್ರಾಮ, ನಾಪೋಕ್ಲು.
    II. ರಫೀಕ್, 38 ವರ್ಷ, ಅಯ್ಯಂಗೇರಿ, ಭಾಗಮಂಡಲ.
  19. ಫಾರಾನ್, 33 ವರ್ಷ, ಅಯ್ಯಂಗೇರಿ, ಭಾಗಮಂಡಲ

.
ವಶಪಡಿಸಿಕೊಂಡಿರುವ ಸ್ವತ್ತುಗಳ ವಿವರ –
:

  1. 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು.
  2. do.2,00,000/-
  3. ಬ್ಯಾಂಕ್ ಖಾತೆ ಫ್ರೀಜ್ ಮೊತ್ತ ರೂ. 2,08,221/-
  4. ಎಮೆ ಮೇಲೆ ಹಣ ಹೂಡಿಕೆ ರೂ. 1,26,504/-
  5. ಒಂದು ಐಫೋನ್ ಮೊಬೈಲ್ ಮೌಲ್ಯ ರೂ. 1,40,000/-

ಸದರಿ ಪ್ರಕರಣಗಳಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ
ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಇವರು ಶ್ಲಾಘಿಸಿರುತ್ತಾರೆ.