ರೈತರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ, ಮುಂದೆಯೂ ಸಮಸ್ಯೆ ಪರಿಹಾರಕ್ಕೆ ಯತ್ನ ಮಾಡುವುದಾಗಿ ಶಾಸಕ ಡಾ. ಮಂತರ್ ಗೌಡ ಹೇಳಿಕೆ ನೀಡಿದ್ದಾರೆ.
ನಾಳೆ ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ರೈತರ ಪ್ರತಿಭಟನೆಗೆ ನೈತಿಕ ಬೆಂಬಲ ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ ಈಗಾಗಲೇ ತಾನು ಮತ್ತು ಕೊಡಗಿನ ಶಾಸಕರಾದ ಎ. ಎಸ್. ಪೊನ್ನಣ್ಣ ಹಾಗು ಸುಜಾ ಕುಶಾಲಪ್ಪ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಸಿ ಮತ್ತು ಡಿ ಲ್ಯಾಂಡ್ ಕುರಿತು ಸರ್ಕಾರದ ಗಮನ ಸೆಳೆದಿದ್ದು ಸೂಕ್ತ ಸ್ಪಂದನವನ್ನು ಸರಕಾರದಿಂದ ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿದೆ.ರೈತರ ಪರ ರಾಜ್ಯ ಸರ್ಕಾರ ಸದಾ ಇರಲಿದೆ.
ಕೊಡಗಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಅರಿವು ತನಗೆ ಇದ್ದು ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಮುಂದಿನ ದಿನಗಳಲ್ಲಿ ಚರ್ಚಿಸಿ, ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಲು ಶ್ರಮಿಸುತ್ತೇನೆ ಎಂದು ಶಾಸಕ ಮಂತರ್ ಗೌಡ ಹೇಳಿದ್ದಾರೆ. ರೈತರ
ನಾಳಿನ ಉದ್ದೇಶಿತ ಪ್ರತಿಭಟನೆ ಶಾಂತಿಯುತವಾಗಿ ಇರಲಿ ಎಂದು ಮನವಿ ಮಾಡಿರುವ ಶಾಸಕರು, ಓರ್ವ ಕಾಫಿ ಬೆಳೆಗಾರನೂ ಆಗಿ ತಾನು ಸದಾ ಜಿಲ್ಲೆಯ ರೈತರ ಪರವಾಗಿ ಇರುತ್ತೇನೆ.ಸರಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ತಿಳಿಸಿ ಅದನ್ನು ಶೀಘ್ರ ಪರಿಹರಿಸಲು ಶ್ರಮಿಸುವುದಾಗಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.