ಹಾರಂಗಿ ಅತ್ತೂರು ಮಾರ್ಗದ ಜ್ಞಾನ ಗಂಗಾ ಶಾಲೆಯ ಸಮೀಪದ ಮುಂಭಾಗದ ರಸ್ತೆಯಲ್ಲಿ ಜಿಂಕೆಯೊಂದು ವಾಹನ ಅಪಘಾತಕ್ಕೆ ಸಿಲುಕಿ ಮೃತಪಟ್ಟಿದೆ.ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿರುವ ಈ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು ಮೃತಪಟ್ಟ ಗಂಡು ಚುಕ್ಕಿ ಜಿಂಕೆ ಅಂದಾಜು 4-5 ವರ್ಷ ಪ್ರಾಯದಿರಬಹುದು ಎಂದು ಅಂದಾಜಿಸಲಾಗಿದೆ, ಕಳೆದ ರಾತ್ರಿ ಇಲ್ಲವೇ ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿರಬಹುದು ಎಂದು ಅಂಜಗಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಕ್ಕಿ ಪಡೆಸಿದ ವಾಹನದ ಶೋಧ ಕಾರ್ಯ ಕೈಗೊಂಡಿದ್ದಾರೆ.