ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದ ಶ್ರೀ ಪನ್ನಾಂಗಾಲತಮ್ಮೆ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಪುತ್ತರಿ ಕಪ್ ,ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ವನ್ನು ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ದಿನಾಂಕ 18 ರಿಂದ 22 ಭಾನುವಾರ ದವರೆಗೆ ಆಯೋಜಿಸಲಾಗಿದ್ದು ಪುತ್ತರಿ ಕಪ್ ಕೆಂಬಟ್ಟಿ ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಿತು, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿ ಗಳು ಚಾಲನೆ ನೀಡಿದರು, ಮುಖ್ಯ ಅಥಿತಿಗಳಾಗಿ ಆಗಮಿಸಿದ ಕುವಲೆಕುಟ್ಟಡ ಗಿರೀಶ್ ಮಾತನಾಡಿ ನಮ್ಮ ಕೆಂಬಟ್ಟಿ ಜನಾಂಗ ಮುಂದಕ್ಕೆ ಬರಬೇಕು ಎಂಬ ಪ್ರಯತ್ನ ಮಾಡಿದರು , ಸಹಾ ತಮ್ಮದೇ ಅದ ಸಮಸ್ಯೆಯಿಂದ ಮುಂದೆ ಬರಲು ಸಾಧ್ಯವಾಗದೇ ಇರುವುದು ಕಂಡುಬರುತ್ತಿದೆ, ಆದರೆ ಈ ರೀತಿಯ ಕ್ರೀಡೆ ಗಳಿಂದ ನಮ್ಮ ಜನಾಂಗದ ವರು ಬಂದು ಸೇರಿದರೆ ಮಾತ್ರ ಕೆಂಬಟ್ಟಿ ಜನಾಂಗದ ನಾಡು ನುಡಿ ಸಂಸ್ಕೃತಿಯನ್ನು ಮುಂದೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು, ಈ ಸಂದರ್ಭ ವೇದಿಕೆಯಲ್ಲಿ ಚಟ್ಟಕುಟ್ಟಡ ಶ್ರೀಮತಿ ಸುಬ್ಬಕ್ಕಿ ಮುತ್ತಪ್ಪ. ಚವರೆಕುಟ್ಟಡ ಶ್ರೀ ಸುಬ್ರಮಣಿ. ಚಿಮ್ಮಿಕುಟ್ಟಡ ವಿಲ್ಮಾ. ಶ್ರೀ ಪನ್ನಾಂಗಾಲತಮ್ಮೆ ಯುವಕ ಸಂಘದ ಅಧ್ಯಕ್ಷರಾದ ಕುಪರೆ ಕುಟ್ಟಡ ಸಾಗರ್ ಪೂವಣ್ಣ . ಚಟ್ಟಕುಟ್ಟಡ ಅಪ್ಪಚು ಹಾಗೂ ಸಂಘದ ಸದಸ್ಯರು ಮತ್ತು ಕ್ರೀಡಾಪಟುಗಳು ಹಾಜರಿದ್ದರು. 5 ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯಿಂದ 28 ತಂಡಗಳು ಭಾಗವಹಿಸುತ್ತಿದ್ದು . ಭಾನುವಾರ ದಿನ ಅಂತಿಮ ಪಂದ್ಯಾಟದ ನಡೆಯಲಿದೆ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ .ಮಕ್ಕಳ ಮನರಂಜನಾ ಕಾರ್ಯಕ್ರಮ ಹಾಗೂ 5 ದಿನಗಳು ಸಹಾ ಪ್ರೇಕ್ಷಕರಿಗೆ ಹಾಗೂ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಯನ್ನು ಮಾಡಲಾಗಿದೆ. ಅಂತಿಮ ಪಂದ್ಯಾಟದಲ್ಲಿ ಜಯಗಳಿಸಿದ ತಂಡಕ್ಕೆ ನಗದು ಮತ್ತು ಟ್ರೊಫಿ.ರನ್ನರ್ಸ್ ತಂಡಕ್ಕೆ ಟ್ರೊಫಿ ಹಾಗೂ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷರಾದ ಕುಪರೆ ಕುಟ್ಟಡ ಸಾಗರ್ ಮಾಹಿತಿ ನೀಡಿದರು.