ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಕೊಟ್ಟ ತಪ್ಪಿಗೆ ಇಲ್ಲೊಬ್ಬ ಪಿತಾಮಹ ಬರೋಬ್ಬರಿ ರೂ. 25 ಸಾವಿರ ದಂಡ ತೆತ್ತಿದ್ದಾನೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರೇಂಜರ್ ಬ್ಲಾಕಿನ ಬಿ.ಎಸ್. ಮಂಜುನಾಥ ಎಂಬುವವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ನೀಡಿದ್ದರಿಂದ
ಸೋಮವಾರಪೇಟೆ ಪೊಲೀಸ್ ಠಾಣೆಯ ಮೊಕದ್ದಮ್ಮೆಸಂಖ್ಯೆ 116 /24 ರಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಸೋಮವಾರಪೇಟೆ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ
ಕೆ. ಗೋಪಾಲಕೃಷ್ಣ ಅವರು, ರೂ. 25 ಸಾವಿರ ದಂಡ ವಿಧಿಸಿದ್ದಾರೆ.
ಅಲ್ಲದೇ ದ್ವಿಚಕ್ರ ವಾಹನದ ವಿಮೆಯನ್ನು ನವೀಕರಿಸದ ಕಾರಣ ರೂ. 2 ಸಾವಿರ, ಒಟ್ಟು 27 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.