ಕಾಡಾನೆ ಹಾದಿಯನ್ನು ತಡೆಗಟ್ಟುವ ಸಲುವಾಗಿ ಸೋಲಾರ್ ತಡೆಬೇಲಿಗೆ 68 ಕೋಟಿ ರು.ಗಳನ್ನು ಸಕಾ೯ರ ಮಂಜೂರು ಮಾಡಿದ್ದು, ಕೊಡಗಿನಿಂದ ಸಕಲೇಷಪುರದವರೆಗೂ ವನ್ಯಜೀವಿ ದಾಂಧಲೆ ತಡೆಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಚಾಮರಾಜನಗರದ ಮಲೈಮಹಾದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಗಿಸಿ ಎರಡು ಗಂಟೆಗಳು ತಡವಾಗಿ ಹೆಲಿಕಾಪ್ಠರ್ ಮೂಲಕ ಗಾಲ್ಫ್ ಹೆಲಿಪ್ಯಾಡಿಗೆ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವನ್ಯಜೀವಿ ಹಾವಳಿ ತಡೆಗೆ ತಜ್ಞರು ಪರಿಶೀಲಿಸಿ ವರದಿ ನೀಡಲಿದ್ದು ಕೊಡಗಿನಲ್ಲಿ ನಿರಂತರ ಮಳೆಯಿಂದಾಗಿ ಪ್ರಗತಿ ಕಾಮಗಾರಿ ವೇಗಕ್ಕೆ ತೊಡಕು ಉಂಟಾಗಿದೆ ಎಂದರು ಹೀಗಿದ್ದರೂ ಕೊಡಗಿನ ಅಭಿವೖದ್ದಿ ಯೋಜನೆಗಳಿಗೆ ಸಕಾ೯ರದಿಂದ ಸಮಪ೯ಕ ಅನುದಾನ ನೀಡಿದ್ದೇವೆ.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮಾಜಿ ಶಾಸಕ ಎಂ.ಪಿ. ಸುನೀಲ್ ಸುಬ್ರಹ್ಮಣಿ ,ಅನಿತಾ ಪೂವಯ್ಯ. ರಾಬಿನ್ ದೇವಯ್ಯ ಸೇರಿದಂತೆ ಬಿಜೆಪಿ ಪ್ರಮುಖರಿಂದ ಮುಖ್ಯಮಂತ್ರಿಗೆ ಸ್ವಾಗತ – ಜಿಲ್ಲಾಡಳಿತದ ಪರವಾಗಿಯೂ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಂದ ಸ್ವಾಗತ ಕೋರಲಾಯಿತು.