ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಡವ ಕುಟುಂಗಳ ನಡುವಿನ 23ನೇ ಹಾಕಿ ಪಂದ್ಯಾವಳಿಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸಾಕ್ಷಿಯಾಗಿದೆ.ಈ ಭಾರಿ ಅಪಚೆಟ್ಟಟೋಳಂಡ ಕುಟುಂಬ ಟೂರ್ನಿ ಆಯೋಜಿಸಿದ್ದು ಸಾಂಪ್ರದಾಯಿಕ ಮೆರವಣಿಗೆ,ಕಲಾತಂಡಗಳ ಪ್ರದರ್ಶನ ಸೇರಿದಂತೆ ಶುಭಕಾರ್ಯದ ಸಂದರ್ಭ ಸಂಪ್ರದಾಯದ ಗಾಳಿಯಲ್ಲಿ ಗುಂಡು ಹಾರಿಸಿ ಧ್ವಜಾರೋಹಣ ಮೂಲಕ ನೀಡಲಾಯಿತು.

ಇದೇ ಸಂದರ್ಭ ಕೊಡವ ಹಾಕಿ ಪಂದ್ಯಾವಳಿಯ ಜನಕ ಪಾಂಡಂಡ ಕುಟ್ಟಪ್ಪ ಪುತ್ರ ಬೋಪಣ್ಣ ತಂದೆಯ ಸ್ಮರಣಾರ್ಥ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡುವುದಾಗಿ ಘೋಷಣೆ ಮಾಡಿದರು.

ಮುಂದಿನ ವರ್ಷ ಮತ್ತೆ ನಾಪೋಕ್ಲುವಿನಲ್ಲಿ ಕುಂಡ್ಯೋಳಂಡ ಕುಟುಂಬ ,2025 ರಲ್ಲಿ ಮುದ್ದಂಡ ಕುಟುಂಬ ಮಡಿಕೇರಿಯಲ್ಲಿ,2026ರಲ್ಲೆ ಮತ್ತೆ ನಾಪೋಕ್ಲುವಿನಲ್ಲಿ ಚೇಂನಂಡ ಕುಟುಂಬಸ್ಥರು ಆಯೋಜಸುವುದಾಗಿ ಘೋಷಣೆ ಮಾಡಿದರು.
ಉದ್ಘಾಟನಾ ಪಂದ್ಯಾವಾಗಿ ಕೊಡವ ಹಾಕಿ ಅಕಾಡೆಮಿ ಮತ್ತು 24 ಕೂರ್ಗ್ ರೆಜಿಮಂಟ್ ನಡುವೆ ನಡೆಯಿತು.