ತನ್ನ ಜನ್ಮ ದಿನಾಂಕ ಸಂಬಂಧ ಆಧಾರವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಟ್ಟು ಚುನಾವಣಾ ಆಯೋಗಕ್ಕೂ ದೂರು ನೀಡಿರುವ ಚೇರಳ ಶ್ರೀಮಂಗಲ ತಿಮ್ಮಯ್ಯ ವಿರುದ್ದ ವಿರಾಜಪೇಟೆ ವಿಧಾನಸಭೆಯ ಶಾಸಕ ಕೆ.ಜಿ ಬೋಪಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿ ಚುನಾವಣೆ ಸಂದರ್ಭದಲ್ಲೂ ಒಂದಲ್ಲಾ ಒಂದು ರೀತಿಯ ಷಡ್ಯಂತ್ರ ಮಾಡಿಕೊಂಡು ಬರಲಾಗುತ್ತಿದೆ. ತನ್ನ ತಂದೆ ನೀಡಿದ ಜನ್ಮ ದಿನಾಂಕ ಪ್ರಕಾರವೇ ದಾಖಲೆ ನಮೂದಿಸಿದ್ದು, ತಿಮ್ಮಯ್ಯ ಮೂಲಕ ತನ್ನ ವಿರೋಧಿ ಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದೆ, ತನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.