ಬೇಸಿಗೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದಂತೆ ಅಲ್ಲಲ್ಲಿ ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುತ್ತಿದೆ.

ಹುಣಸೂರು ವಲಯಕ್ಕೆ ಸೇರುಲ್ಪಡುವ ಕೊಡಗಿನ ತಿತಿಮತಿ ಸಮೀಪದ ಆನೆ ಚೌಕೂರು ಗೇಟ್ ಬಳಿ ಅಂದಾಜು 10 ಏಕರೆಯಷ್ಟು ನೆಲಹುಲ್ಲು ಮತ್ತು ಕುರುಚಲು ಕಾಡು ಬೆಂಕಿಗೆ ಆಹುತಿಯಾಗಿದ್ದು, ಅರಣ್ಯ ಇಲಾಖೆಯಿಂದ ಮುಂಜಾಗೃತ ಕ್ರಮ ಇದ್ದರೂ, ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ.