ಕುಶಾಲನಗರ ಮತ್ತು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275 ಮೇಲ್ದರ್ಜೆಗೆ ಏರಿಸುವ ಸಂಬಂಧ ನಾಲ್ಕು ಪಥದ ರಸ್ತೆ ಕಾಮಗಾರಿಗೆ 11 ಕಂಸ್ಟ್ರಕ್ಷನ್ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಶೀಘ್ರದಲ್ಲೇ ಅಂತಿಮ ಗುತ್ತಿಗೆದಾರರನ್ನು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಬಹಿಂಗಗೊಳಿಸಲಿದೆ.

ಭಾರತ್ ಮಾಲಾ ರಸ್ತೆ ಜೋಡಣೆ ಯೋಜನೆಯ ಮೊದಲ ಹಂತದ ಈ ಯೋಜನೆ ಕುಶಾಲನಗರದ ಗುಡ್ಡೆಹೊಸೂರುವಿನಿಂದ ಮಂಡ್ಯದ ಪಶ್ಚಿಮವಾಹಿನಿ
ವರೆಗೆ 92.3 ಕಿಲೋಮೀಟರ್ ರಸ್ತೆ ಬೃಹತ್ ಕಾಮಗಾರಿ ಇದಾಗಿದ್ದು 2026ರ ಒಳಗಾಗಿ ಅಂತ್ಯವಾಗಲಿದ್ದು, ಮೈಸೂರು ಬೆಂಗಳೂರು ನಡುವಿನ ಹೆದ್ದಾರಿ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಡಿಗಲ್ಲು ಹಾಕಲಿದ್ದಾರೆ.