ಕುಶಾಲನಗರದ ವಿವೇಕ ಜಾಗೃತ ಬಳಗ, ಡಿವೈನ್ ಪಾರ್ಕ್ ಟ್ರಸ್ಟ್ (ರಿ )ಸಾಲಿಗ್ರಾಮ ಇದರ ಅಂಗ ಸಂಸ್ಥೆಯ ವತಿಯಿಂದ ಭಜನೆ ಮತ್ತು ವನಿತಾ ಸಂಗಮ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.

ಕುಶಾಲನಗರದ ಗೌಡ ಸಮಾಜದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮ ದಲ್ಲಿ ಸಾಲಿಗ್ರಾಮದ ಡಿವೈನ್ ಪಾರ್ಕ್ ನ ದಕ್ಷ ಸೇವಕಿ ದಿವ್ಯ ತೇಜ್ ಕುಮಾರ್ ಅವರ ಸುದೀರ್ಘ ಪ್ರವಚನ, ಭಜನೆ, ಶ್ರೀರಾಮ ಸ್ತೋತ್ರ ಪಠನೆ,ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿ ಸೂತ್ರಗಳು ಭಕ್ತರನ್ನು ಸೆಳೆಯಿತು. ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಗೆ ಬೆಂಕಿ ಬಳಸದೆ ಅಡುಗೆ ಸ್ಪರ್ಧೆ ಹಮ್ಮಿಕೊಳ್ಳಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಗಣ್ಯರಿಗೆ ಸನ್ಮಾನದ ಜೊತೆ ಸಾಲಿಗ್ರಾಮ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡುವಂತೆ ಅಹ್ವಾನ ನೀಡಲಾಯಿತು.
